ಕರ್ನಾಟಕ

karnataka

ETV Bharat / state

ಪಾಕ್​​ ಪರ ಘೋಷಣೆ ಕೂಗುವವರಿಗೆ ಎನ್​ಕೌಂಟರ್​ ತಕ್ಕ ಉತ್ತರ: ಶಾಸಕ ಸುನೀಲ್​ ಕುಮಾರ್ - Protest by BJP Yuvamorcha

ದೇಶದ್ರೋಹ ಕೆಲಸ ಮಾಡುವ ಹಾಗೂ ಪಾಕ್ ಪರ ಘೋಷಣೆ ಕೂಗುವವರಿಗೆ ಎನ್​​ಕೌಂಟರ್ ತಕ್ಕ‌ ಉತ್ತರ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.

Young woman arrested for shouting pro-Pak slogan
ಬಿಜೆಪಿ ಯುವಮೋರ್ಚಾದಿಂದ ಪ್ರತಿಭಟನೆ

By

Published : Feb 22, 2020, 6:03 PM IST

ಉಡುಪಿ:ದೇಶದ್ರೋಹ ಕೆಲಸ ಮಾಡುವ ಹಾಗೂ ಪಾಕ್ ಪರ ಘೋಷಣೆ ಕೂಗುವವರಿಗೆ ಎನ್​​ಕೌಂಟರ್ ತಕ್ಕ‌ ಉತ್ತರ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.

ಕಾರ್ಕಳದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಎನ್​​ಕೌಂಟರ್​ ಮಾಡಬೇಕು. ಪ್ರಕರಣದ ತನಿಖೆ ಮತ್ತು ಆರೋಪಿಗಳ ವಿಚಾರಣೆ ನಡೆಸುವ ಅಗತ್ಯವೇ ಇಲ್ಲ ಎಂದು ಹೇಳಿದರು.

ಭಾರತದಲ್ಲಿ ಹುಟ್ಟಿ ಬೆಳೆದವರು ಪಾಕ್ ಪರ ಘೋಷಣೆ ಕೂಗ್ತಾರೆ. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಮನಸ್ಸಲ್ಲಿ ಪಾಕ್ ಜಪ ಮಾಡುತ್ತಾರೆ. ಸಿಎಎ ವಿರೋಧಿ ಹೋರಾಟಗಾರರಲ್ಲಿ ಪಾಕ್ ಪರ ಭಾವನೆಗಳಿವೆ. ಈ ಪೈಕಿ ಇಬ್ಬರ ಭಾವನೆ ಬಹಿರಂಗಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ

ಭಾರತದಲ್ಲಿ ಈವರೆಗೆ ದೇಶದ್ರೋಹಿ ಚಟುವಟಿಕೆಗಳಿಗೆ ಬೆಂಬಲ ಸಿಗುತ್ತಿತ್ತು. ನಕ್ಸಲರನ್ನು ಬೆಂಬಲಿಸುವ ಎಡಪಂಥೀಯ ಚಿಂತನೆಯ ಯುವತಿ ಅಮೂಲ್ಯ ದೇಶದಲ್ಲಿ ಅಭದ್ರತೆ, ಅಶಾಂತಿ ಸೃಷ್ಟಿಸಲು ಈ ರೀತಿಯ ಹೇಳಿಕೆ ನೀಡಿದ್ದಾಳೆ. ಇದರ ಹಿಂದಿರುವ ಷಡ್ಯಂತ್ರ ಬಯಲಾಗಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details