ಉಡುಪಿ:ಮಲ್ಪೆಯಲ್ಲಿ ನೀರು ನುಗ್ಗಿ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಮಲ್ಪೆಯಲ್ಲಿ ದೋಣಿ ಮುಳುಗಡೆ: ಎಂಟು ಮೀನುಗಾರರ ರಕ್ಷಣೆ - ಮಲ್ಪೆ ಬೀಚ್
ಉಡುಪಿ ಮಲ್ಪೆಯಲ್ಲಿ ನೀರು ನುಗ್ಗಿ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಮಲ್ಪೆಯಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಪುಷ್ಪ ಜೆ.ಕೋಟ್ಯಾನ್ ಅವರಿಗೆ ಸೇರಿದ ಶ್ರೀಲಲಿತಾಂಬಿಕಾ ಹೆಸರಿನ ಬೋಟ್ ಮುಳುಗಡೆಯಾಗಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಅಲೆಗಳು ಬಡಿದ ರಭಸಕ್ಕೆ ನೀರು ಬೋಟ್ ಒಳ ಹೊಕ್ಕಿತು. ಇದರ ಪರಿಣಾಮ ದೋಣಿ ಮುಳುಗುವ ಅಪಾಯಕ್ಕೆ ಸಿಲುಕಿತು.
ಅಪಾಯದಲ್ಲಿದ್ದ ಬೋಟ್ ಅನ್ನು ಕಂಡ ಅಂಭಾ ಭಗವತಿ ದೋಣಿಯ ಮೀನುಗಾರರು ತಕ್ಷಣ ಧಾವಿಸಿ ಎಂಟು ಮಂದಿ ಮೀನುಗಾರರನ್ನು ರಕ್ಷಿಸಿದರು. ಅಲೆಗಳ ಅಬ್ಬರ ಹೆಚ್ಚಾದ ಪರಿಣಾಮ ದೋಣಿಯನ್ನು ದಡ ಸೇರಿಸಲು ಸಾಧ್ಯವಾಗಿಲ್ಲ. ಮುಳುಗಡೆಯಾದ ದೋಣಿನಲ್ಲಿ 7.5 ಸಾವಿರ ಲೀಟರ್ ಡಿಸೇಲ್ ಬಲೆ, ಸಲಕರಣೆಗಳು ಸೇರಿದಂತೆ ₹ 65 ಲಕ್ಷ ಮೌಲ್ಯದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.