ಉಡುಪಿ:ಅಕ್ರಮವಾಗಿ ಮೂರು ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಕಾರೊಂದನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಡುಪಿಯಲ್ಲಿ ಮೂರು ಜಾನುವಾರುಗಳ ರಕ್ಷಣೆ, ಆರೋಪಿಗಳು ಪರಾರಿ - ಉಡುಪಿ ಸುದ್ದಿ
ಅಕ್ರಮವಾಗಿ ಮೂರು ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಕಾರೊಂದನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದಿದ್ದು, ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ.
ಉಡುಪಿಯಲ್ಲಿ ಮೂರು ಜಾನುವಾರುಗಳ ರಕ್ಷಣೆ..ಗೋಗಳ್ಳರು ಪರಾರಿ
ಕಾರ್ಕಳದ ಪಳ್ಳಿ ಕಡೆಯಿಂದ ವೇಗವಾಗಿ ಬಂದ ಕಾರನ್ನು ಶಿರ್ವ ಸಮೀಪ ಪೊಲೀಸರು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಗೋವುಗಳನ್ನು ಸಾಗಿಸುತ್ತಿದ್ದವರು ಕಾರು ನಿಲ್ಲಿಸದೆ ತೆರಳಿದ್ದಾರೆ. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಳ್ಳೆ ಕಟ್ಟಿಂಗೇರಿ ಸಮೀಪ ಅಡ್ಡ ಹಾಕಿದ್ದಾರೆ. ತಕ್ಷಣ ಕಾರಿನಲ್ಲಿದ್ದವರು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಕಾರಿನಲ್ಲಿ ಮೂರು ಜಾನುವಾರುಗಳ ಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದುದು ಗೊತ್ತಾಗಿದೆ.