ಉಡುಪಿ:ಮಲ್ಪೆ ಬೀಚ್ನಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಮಲ್ಪೆ ಜೀವ ರಕ್ಷಕ ದಳ ಸಿಬ್ಬಂದಿ ಇವರನ್ನು ರಕ್ಷಣೆ ಮಾಡಿದ್ದಾರೆ. ಮೋಬಿನ್, ಸೋಫಿಯಾ, ಅಹ್ಮದ್ ಮತ್ತು ಮೊಹಮ್ಮದ್ ಬದುಕಿಳಿದವರು.
ಮಲ್ಪೆ ಬೀಚ್ನಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ - malpe beach
ಪ್ರಾವಾಸಕ್ಕೆಂದು ಬಂದಿದ್ದ ವಿಜಯಪುರ ಮೂಲದ ನಾಲ್ವರು ಜೀವ ರಕ್ಷಕ ದಳ ಸಿಬ್ಬಂದಿಯ ಮಾತ ಕೇಳದೆ ಸಮುದ್ರದಲ್ಲಿ ಈಜಲು ಹೋದಾಗ ಕೊಚ್ಚಿ ಹೋಗಿದ್ದರು. ಬಳಿಕ ಜೀವ ರಕ್ಷಕ ದಳದ ಸಿಬ್ಬಂದಿ ಈ ನಾಲ್ವರನ್ನು ರಕ್ಷಿಸಿದ್ದಾರೆ.
ಮಲ್ಪೆ ಬೀಚಿನಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ನಾಲ್ವರ ರಕ್ಷಣೆ
ನಾಲ್ವರು ಜೀವರಕ್ಷಕ ದಳದವರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಕಡಲಿಗೆ ಇಳಿದಿದ್ದರು. ಕಡಲು ಪ್ರಕ್ಷುಬ್ಧವಾಗಿದ್ದ ಕಾರಣ ಈಜುವ ಸಂದರ್ಭದಲ್ಲಿ ದುರಂತ ನಡೆದಿದೆ. ಕೊಚ್ಚಿ ಹೋಗುತ್ತಿದ್ದ ವಿಜಯಪುರ ಮೂಲದ ನಾಲ್ವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಭಾನುವಾರ ಸಂಜೆ ಸಹ ನಾಲ್ವರನ್ನು ರಕ್ಷಣೆ ಮಾಡಲಾಗಿತ್ತು.
ಇದನ್ನೂ ಓದಿ:ಹೊಸಪೇಟೆಯಲ್ಲಿ ವೃದ್ಧೆಯ ಮಾಗಲ್ಯ ಸರ ಕಳ್ಳತನ.. ಸ್ಥಳೀಯರಿಂದಲೇ ಕೃತ್ಯ ಶಂಕೆ