ಉಡುಪಿ: ಗೋಹತ್ಯೆ ಮಾನವೀಯತೆಗೆ ಎಸಗುವ ದ್ರೋಹ. ಕೂಡಲೇ ಗೋಹತ್ಯೆ ನಿಷೇಧ ಜಾರಿಯಾಗಬೇಕು. ಭಾರತದ ರಾಷ್ಟ್ರೀಯ ಪ್ರಾಣಿ ಗೋವು ಆಗಲಿ. ಆ ಸ್ಥಾನ ಹುಲಿಗೆ ನೀಡಿರುವುದಕ್ಕೆ ಭಯೋತ್ಪಾದನೆ ಹೆಚ್ಚಾಗಲು ಕಾರಣ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೃಷ್ಣಮಠದ ಸಂತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಆತಂಕವಾದ ಅನುಕಂಪವಾದ ಆಗಬೇಕು. ಗಂಗೆ ನಮ್ಮನ್ನು ಶುದ್ಧೀಕರಣ ಮಾಡಬೇಕು. ವಿಪರ್ಯಾಸ ಎಂದರೆ, ನಾವು ಗಂಗೆಯನ್ನು ಶುದ್ಧಿ ಮಾಡುವ ಸ್ಥಿತಿಗೆ ಬಂದಿರುವುದು. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಹಾಗೂ ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಗೊಳಿಸಲು ಮುಂದಾಗಬೇಕು. ಈ ಕುರಿತು ಎಲ್ಲ ಧರ್ಮೀಯರು ಸೇರಿ ಒಂದು ಸಭೆ ನಡೆಸಿ ಚರ್ಚಿಸಬೇಕಾಗಿದೆ ಎಂದು ಹೇಳಿದರು.