ಉಡುಪಿ: ಶಿವಾಜಿ ಮಹಾರಾಜರ ಐತಿಹಾಸಿಕ ದಾಖಲೆ ಪುನರ್ ನೆನಪಿಸುವ ಹಿನ್ನೆಲೆ ಕನ್ನಡದ ನೆಲದಲ್ಲಿ ಅದರಲ್ಲಿಯೂ ಕುಂದಾಪುರದ ಬಸ್ರೂರಿನಲ್ಲಿ ಕಾರ್ಯಕ್ರಮ ನಡೆಯಿತು.
ಬಸ್ರೂರು ಶಾರದ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡದ ನೆಲದಲ್ಲಿ 'ಛತ್ರಪತಿ ಶಿವಾಜಿ' ಕಾರ್ಯಕ್ರಮಕ್ಕೆ ರಾಜ್ಯದ ಸಾವಿರಾರು ಕಾರ್ಯಕರ್ತರು ಸಾಕ್ಷಿಯಾದರು.
ಕನ್ನಡದ ನೆಲದಲ್ಲಿ 'ಛತ್ರಪತಿ ಶಿವಾಜಿ' ಕಾರ್ಯಕ್ರಮ 16ನೇ ಶತಮಾನದಲ್ಲಿ ಬಸ್ರೂರಿಗೆ ಬಂದು ಫೋರ್ಚುಗೀಸರಿಂದ ಮುಕ್ತಿಗೊಳಿಸಿದ ಶಿವಾಜಿ ಮಹಾರಾಜರ ಸ್ಮರಣೆಯ ಅಂಗವಾಗಿ ಬಸ್ರೂರಲ್ಲಿ ಛತ್ರಪತಿ ಶಿವಾಜಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಹಿನ್ನೆಲೆ ಆಯೋಜಿಸಲಾದ ಬೈಕ್ ರ್‍ಯಾಲಿಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಪಾಲ್ಗೊಂಡರು. ಶಿವಾಜಿ ಹಾದು ಹೋದ ಉತ್ತರ ಕನ್ನಡದ ಕಾರವಾರ, ಶಿವಮೊಗ್ಗ ಹಾಗೂ ಮೈಸೂರು ಕಡೆಗಳಿಂದ ಸಹಸ್ರಾರು ಮಂದಿ ಯುವಕರು ಮೂರು ಮಾರ್ಗವಾಗಿ ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಬಳಿಕ ಬಸ್ರೂರು ಕಾಲೇಜಿನ ಮೈದಾನದಲ್ಲಿ ಹಾಕಲಾಗಿದ್ದ ಅದ್ದೂರಿನ ಕೋಟೆಯಾಕಾರದ ಸ್ಪೇಜ್ನಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಡಗಲಿಯ ಹಲ ಸಂಸ್ಥಾನದ ಹಲವೀರಪ್ಪ ಸ್ವಾಮೀಜಿ ರಾಮ ಮತ್ತು ಶಿವಾಜಿ ಆದರ್ಶಗಳನ್ನು ತಿಳಿದರು. ಯುವ ಬ್ರಿಗೇಡ್‌ನ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ ಫೋರ್ಚುಗೀಸರು, ಡಚ್ಚರ ನೆಲೆಯಾಗಿದ್ದ ಕರಾವಳಿಯಲ್ಲಿ ಅದರಲ್ಲೂ ಬಸ್ರೂರಿನಲ್ಲೇ ಪರಕೀಯರ ವಿರುದ್ಧ ದೇಶದ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಆ ಕಾರ್ಯವನ್ನು ಮಾಡಿದ್ದು ಛತ್ರಪತಿ ಶಿವಾಜಿ. ಆ ದಿನವೇ ಶಿವಾಜಿಯವರು ಕನ್ನಡದ ನೆಲದಿಂದಲೇ ಹಿಂದೂ ಸಾಮ್ರಾಜ್ಯ ಕಟ್ಟುವ ಶಪಥಗೈದಿದ್ದರು. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಶಿವಾಜಿಯವರನ್ನು ಕೇವಲ ಒಂದು ಜಾತಿ, ಭಾಷೆಗೆ ಸೀಮಿತಗೊಳಿಸುತ್ತಿರುವುದು ಸರಿಯಲ್ಲ ಎಂದರು.