ಉಡುಪಿ:ಮಣಿಪಾಲ ಮಾಹೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪದ ವಿಡಿಯೋವೊಂದು ವೈರಲ್ ಆಗಿದೆ. ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನಲ್ಲಿ ಘಟನೆ ನಡೆದಿದೆ ಎನ್ನಲಾದ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿದ್ದು, ಈ ಸಂಬಂಧ ವಿವಿ ಆಡಳಿತ ಮಂಡಳಿಯು ಆರೋಪಿ ಪ್ರೊಫೆಸರ್ ಅವರನ್ನು ಅಮಾನತು ಮಾಡಿದೆ.
ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಓರ್ವ ವಿದ್ಯಾರ್ಥಿಗೆ ಟೆರರಿಸ್ಟ್ ಎಂಬ ಅರ್ಥದಲ್ಲಿ ಪ್ರೊಫೆಸರ್ ಮಾತನಾಡಿದ್ದಾರೆ ಹಾಗೂ ಈ ಘಟನೆ ನವೆಂಬರ್ 26ರಂದು ನಡೆದಿದೆ ಎನ್ನಲಾಗ್ತಿದೆ. ಈ ಮಾತಿಗೆ ತರಗತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿ 'ನನ್ನನ್ನು ಟೆರರಿಸ್ಟ್ ಎಂದು ಕರೆಯಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅನಗತ್ಯವಾಗಿ ತಮಾಷೆಯಲ್ಲಿ ಈ ರೀತಿ ಮಾತನಾಡಬೇಡಿ. ಅಲ್ಲದೆ, ತಮಾಷೆಯಾಗಿ ನಿಮ್ಮ ಮಗನನ್ನು ಹೀಗೆ ಕರೆಯುತ್ತೀರಾ ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾನೆ. ಆಗ ಪ್ರೊಫೆಸರ್ ಸ್ಥಳದಲ್ಲೇ ಕ್ಷಮೆ ಕೇಳಿದ್ದಾರೆ. ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ, ಎಂದು ವಿದ್ಯಾರ್ಥಿ ಆಕ್ಷೇಪ ಎತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.