ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ರಸ್ತೆಗಿಳಿದ ಖಾಸಗಿ ಬಸ್: ಸಾಮಾಜಿಕ ಅಂತರ ಮರೆತ ಜನನಾಯಕರು - latest udupi news

ನಗರದ ಏಳು ಮಾರ್ಗಗಳಲ್ಲಿ 12 ಬಸ್ಸುಗಳು ಓಡಾಟ ನಡೆಸಲು ಶುರು ಮಾಡಿವೆ. ಟಿಕೆಟ್ ಕಲೆಕ್ಟರ್ ಇಲ್ಲದೆ ಸಿಟಿ ಬಸ್ಸುಗಳು ಸಂಚರಿಸಲಿವೆ. ಪ್ರಯಾಣಿಕರಿಗೆ ಉಚಿತ ಬಸ್​ ಸೇವೆಯನ್ನು ಶಾಸಕ ರಘುಪತಿ ಭಟ್ ಒದಗಿಸಿದ್ದಾರೆ.

private-buss
ಉಡುಪಿಯಲ್ಲಿ ರಸ್ತೆಗಿಳಿದ ಖಾಸಗಿ ಬಸ್ಸುಗಳು

By

Published : May 25, 2020, 9:20 PM IST

ಉಡುಪಿ:ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ರಸ್ತೆಗಳಿದಿದ್ದು, ಜನಸಾಮಾನ್ಯರ ಕಷ್ಟ ಅರಿತ ಶಾಸಕರು ತಮ್ಮ ಹಣದಿಂದ ಬಸ್​ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ನಗರದ 7 ಮಾರ್ಗಗಳಲ್ಲಿ 12 ಬಸ್ಸುಗಳು ನಿರ್ವಾಹಕರಿಲ್ಲದೆ ಸಂಚರಿಸಲಿವೆ. ಪ್ರಯಾಣಿಕರಿಗೆ ಉಚಿತ ಬಸ್​ ಸೇವೆಯನ್ನು ಶಾಸಕ ರಘುಪತಿ ಭಟ್ ಒದಗಿಸಿದ್ದಾರೆ. ಬಸ್ ಪ್ರಯಾಣಕೆಜನ ಹಿಂದೇಟು ಹಾಕುತ್ತಿರುವ ಕಾರಣ ನಷ್ಟ ಅನುಭವಿಸುತ್ತಿರುವ ಖಾಸಗಿಯರ ನೆರವಿಗೆ ಶಾಸಕರು ಧಾವಿಸಿದ್ದಾರೆ.

ಉಡುಪಿಯಲ್ಲಿ ರಸ್ತೆಗಿಳಿದ ಖಾಸಗಿ ಬಸ್ಸುಗಳು

ತಮ್ಮ ಬಸ್​ಗಳನ್ನು ರಸ್ತೆ ಗಳಿಸಲು ಹಿಂದೇಟು ಹಾಕುತ್ತಿರುವ ಮಾಲೀಕರು, ತೆರಿಗೆ ಬಾರ ಇಳಿಸುವಂತೆ ಸರ್ಕಾರದ ಮುಂದೆ ಮನವಿ ಇಟ್ಟಿದ್ದಾರೆ.
ಬಸ್ ಇಲ್ಲದೆ ದಿನಗೂಲಿಗೆ ತೆರಳುವ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ.

ಬಸ್​ ಪ್ರಯಾಣಕ್ಕೆ ಬರುವ ಪ್ರತಿ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ಬಿಜೆಪಿ ಕಾರ್ಯಕರ್ತರು ಸಂಗ್ರಹಿಸಲಿದ್ದಾರೆ. ಉಚಿತ ಬಸ್ ಸೇವೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

ಸಾಮಾಜಿಕ ಅಂತರ ಮರೆತ ಬಿಜೆಪಿ ರಾಜಾಧ್ಯಕ್ಷ :

ಉಚಿತ ಬಸ್​ ಸೇವೆ ಉದ್ಘಾಟನೆ ವೇಳೆ ಸೇರಿದ್ದ ನೂರಾರು ‌ಕಾರ್ಯಕರ್ತರ ನಡುವೆ ಗುಂಪು ಸೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಟೀಲ್​ ಸಾಮಾಜಿಕ ಅಂತರ ಮರೆತದ್ದು ನೆರೆದವರ ಬೇಸರಕ್ಕೆ ಕಾರಣವಾಯಿತು.

ABOUT THE AUTHOR

...view details