ಕರ್ನಾಟಕ

karnataka

By

Published : May 14, 2021, 7:17 PM IST

ETV Bharat / state

ಮೀನು, ಮಟನ್ ಬದಲಿಗೆ ಕೋಳಿ ಕಾಲು ಬೇಯಿಸಿ ಸಾರು ಮಾಡ್ತಾರೆ: ಜೈಲು ಸೂಪರಿಂಟೆಂಡೆಂಟ್ ವಿರುದ್ಧ ಹೋರಾಟ

ಕಾನೂನು ಪ್ರಕಾರ ವಾರಕ್ಕೊಮ್ಮೆ ಮೀನು, ಮಟನ್ ಕೊಡಬೇಕು, ಆದರೆ ಇಲ್ಲಿ ಕೋಳಿ ಕಾಲು ಬೇಯಿಸಿ ಸಾರು ಮಾಡಿ ಹಾಕುತ್ತಾರೆ ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.

 Prisoners protest against Udupi jail superintendent Srinivasa Gowda
Prisoners protest against Udupi jail superintendent Srinivasa Gowda

ಉಡುಪಿ: ಉಡುಪಿ ಜೈಲು ಸೂಪರಿಂಟೆಂಡೆಂಟ್ ಶ್ರೀನಿವಾಸ ಗೌಡ ವಿರುದ್ಧ ಕೈದಿಗಳ ಉಪವಾಸ ಸತ್ಯಾಗ್ರಹ ಶುರುವಾಗಿದೆ.

ಇಂದು ಬೆಳಗ್ಗೆಯಿಂದ ಯಾವುದೇ ಆಹಾರ ಸ್ವೀಕರಿಸದೇ ಕೈದಿಗಳು ಸತ್ಯಾಗ್ರಹ ನಡೆಸುತ್ತಿದ್ದಾರೆ. ಉಡುಪಿಯ ಹಿರಿಯಡ್ಕದ ಕಾಜರಗುತ್ತು ಎಂಬಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸರಕಾರದಿಂದ ಕೈದಿಗಳಿಗೆ ಬರುವ ಸವಲತ್ತುಗಳನ್ನು ಕೈದಿಗಳಿಗೆ ನೀಡುತ್ತಿಲ್ಲ ಎಂದು ಆರೋಪ ಮಾಡಿರೋ ಖೈದಿಗಳು ಜೈಲಿನಲ್ಲಿ ಅತ್ಯಂತ ಕಳಪೆ ಮಟ್ಟದ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಕಾನೂನು ಪ್ರಕಾರ ವಾರಕ್ಕೊಮ್ಮೆ ಮೀನು, ಮಟನ್ ಕೊಡಬೇಕು. ಆದರೆ, ಇಲ್ಲಿ ಕೋಳಿ ಕಾಲು ಬೇಯಿಸಿ ಸಾರು ಮಾಡಿ ಹಾಕುತ್ತಾರೆ. ಕೈದಿಗಳಿಗೆ ಬರುವ ರೇಷನ್ ಜೈಲು ಸುಪರಿಂಟೆಂಡೆಂಟ್ ಮನೆ ಸೇರುತ್ತಿದೆ. ಪ್ರತಿಯೊಂದು ವಸ್ತುವಿಗೂ ಲಂಚ ಕೇಳುವ ಜೈಲು ಸುಪರಿಂಟೆಂಡೆಟ್ ಶ್ರೀನಿವಾಸಗೌಡ ಕೈದಿಗಳಿಗೆ ಬರುವ ಸವಲತ್ತುಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜೈಲು ಸೂಪರಿಂಟೆಂಡೆಂಟ್​ಮತ್ತು ಇನ್ನೋರ್ವ ಸಿಬ್ಬಂದಿ ಕಟಾರಿ ಎಂಬಾತನ ವಿರುದ್ಧ ಕೈದಿಗಳು ಲಂಚ ಸ್ವೀಕಾರದ ಆರೋಪ ಮಾಡಿದ್ದು, ಶಾಸಕರು ಮತ್ತು ನ್ಯಾಯಾಧೀಶರು ಜೈಲಿಗೆ ಬಂದು ಪರಿಶೀಲನೆ ನಡೆಸಬೇಕು ಎಂದು ಕೈದಿಗಳ ಆಗ್ರಹಿಸಿದ್ದಾರೆ.

ABOUT THE AUTHOR

...view details