ಉಡುಪಿ: ಚೀನಾ ಕೊರೊನಾ, ಬ್ರಿಟನ್ ಕೊರೊನಾ ಆತಂಕದ ನಡುವೆ ರಾಜ್ಯದಲ್ಲಿ ಕ್ರಿಸ್‌ಮಸ್ ಹಬ್ಬ ಆಚರಿಸಲಾಗುತ್ತಿದೆ. ಅದರಲ್ಲೂ ಕರಾವಳಿಯ ಹಳ್ಳಿಗಳಲ್ಲಿ ಕ್ರಿಸ್‌ಮಸ್ ತಿಂಡಿ ತಿನಿಸುಗಳ ತಯಾರಿ ಜೋರಾಗಿದೆ.
ಸಾಮಾನ್ಯವಾಗಿ ಸಿಟಿಗಳಲ್ಲಿ ಆಗಸಕ್ಕೆ ಸ್ಟಾರ್ ಏರಿಸಿ, ಕೇಕ್ ಕತ್ತರಿಸಿ, ಸಾಂತಾ ಕ್ಲಾಸ್ ವೇಷ ಧರಿಸಿ ಕ್ರಿಸ್‌ಮಸ್ ಮುಗಿಸಿ ಬಿಡ್ತಾರೆ. ಇವು ಎಲ್ಲಾ ಕಡೆ ಕಂಡು ಬರುವಂತಹ ಸಾಮಾನ್ಯ ಸಂಭ್ರಮಾಚರಣೆ. ಆದರೆ ಕರಾವಳಿ ಹಳ್ಳಿಗಳ ಕ್ರಿಸ್‌ಮಸ್ ಇಷ್ಟಕ್ಕೇ ಮುಗಿಯೋದಿಲ್ಲ. ಹಳ್ಳಿಗಳ ಹಬ್ಬ ಅಂದ್ರೆ ಅದರಲ್ಲೊಂದು ಬಾಂಧವ್ಯ ಇರುತ್ತದೆ. ಹಬ್ಬಕ್ಕೆ ಬೇಕಾದ ತಿಂಡಿಗಳನ್ನು ಸುತ್ತಮುತ್ತಲ ಹತ್ತು ಮನೆಯವರು ಸೇರಿ ತಯಾರು ಮಾಡುತ್ತಾರೆ. ಹಂಚಿ ತಿನ್ನುತ್ತಾರೆ.
ಕರಾವಳಿ ಹಳ್ಳಿಗಳಲ್ಲಿ ಕ್ರಿಸ್‌ಮಸ್ ತಿನಿಸುಗಳ ತಯಾರಿ ಜೋರು ಉಡುಪಿಯ ಶಂಕರಪುರ, ಶಿರ್ವ, ಸಾಸ್ತಾನ, ಸಂತೆಕಟ್ಟೆ ವಠಾರದಲ್ಲಿ ಈಗಲೂ ಸುತ್ತಮುತ್ತಲ ಮನೆಯವರೆಲ್ಲ ಸೇರಿ ಹತ್ತಾರು ಬಗೆಯ ತಿಂಡಿ ತಯಾರು ಮಾಡ್ತಾರೆ. ಲಡ್ಡು, ಕರ್ಜಿಕಾಯಿ, ಚಕ್ಕುಲಿ, ತಮ್ಡೆಗುಳೆ, ಸಕ್ಕರೆ ಮಿಠಾಯಿ ಹೀಗೆ ತರಹೇವಾರಿ ತಿನಿಸುಗಳನ್ನು ತಯಾರು ಮಾಡುತ್ತಾರೆ. ಬಳಿಕ ತಯಾರಾದ ತಿಂಡಿಗಳನ್ನು ಸಮಪಾಲು ಮಾಡುವುದು ಹಬ್ಬದ ಸಂಸ್ಕೃತಿ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಇದನ್ನೂ ಓದಿ.. ಅತ್ತೂರು ಸಾಂತ್ ಮಾರಿ ಜಾತ್ರೆ ವೈಭವ: ಕ್ರಿಶ್ಚಿಯನ್ನರಿಗಿಂತ ಹಿಂದೂ-ಮುಸ್ಲಿಂ ಭಕ್ತರೇ ಹೆಚ್ಚು!
ಕ್ರಿಸ್‌ಮಸ್ ಹಬ್ಬದ ದಿನ ಮನೆಗೆ ಬರುವ ಅತಿಥಿಗಳಿಗೂ ಇದೇ ತಿಂಡಿಗಳನ್ನು ವಿತರಿಸಲಾಗುತ್ತದೆ. ಬೇಕರಿ ತಿಂಡಿಗಳನ್ನು ತಿನ್ನುವ ಬದಲು ಮನೆಯಲ್ಲೇ ಮಾಡಿದ ಫ್ರೆಶ್ ತಿಂಡಿಗಳ ಜೊತೆ ಇಲ್ಲಿನ ಕುಟುಂಬಗಳು ಹಬ್ಬ ಆಚರಿಸುತ್ತವೆ.