ಕರ್ನಾಟಕ

karnataka

ETV Bharat / state

ವಿಧಾನಸಭಾ ಚುನಾವಣೆ: ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಘೋಷಣೆ - will contest from karkala constituency

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಘೋಷಣೆ - ಸಚಿವ ಸುನೀಲ್ ಕುಮಾರ್ ಅವರನ್ನು ನಾನು ಶಿಷ್ಯ ಎಂದು ಹೇಳಲು ಹಿಂದೇಟು ಹಾಕುತ್ತೇನೆ - ಸುನೀಲ್ ಕುಮಾರ್ ವಿರುದ್ದ ಮುತಾಲಿಕ್ ಅಸಮಾಧಾನ.

will contest from karkala constituency
ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಘೋಷಣೆ

By

Published : Jan 23, 2023, 6:01 PM IST

ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಘೋಷಣೆ

ಉಡುಪಿ:ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಇದೀಗ ತಾವು ಸ್ಪರ್ಧಿಸುವ ಕ್ಷೇತ್ರದ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸಾವಿರಾರು ಕಾರ್ಯಕರ್ತರ ನೋವಿನ ಧನಿಯಾಗಿ, ಕಾರ್ಯಕರ್ತರ ಒತ್ತಡದಿಂದಾಗಿ ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡವ ನಿರ್ಧಾರವನ್ನು ಮಾಡಿದ್ದಿನಿ ಎಂದು ಶ್ರೀ ರಾಮ ಸೇನೆಯ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಘೋಷಿಸಿದರು.

ಕಾರ್ಕಳದಲ್ಲಿ ಮಾತನಾಡಿದ ಅವರು, ಇಡೀ ಕ್ಷೇತ್ರದಲ್ಲಿ ಏಳೆಂಟು ಬಾರಿ ಪ್ರವಾಸ ಮಾಡಿದ್ದೇನೆ, ಎಲ್ಲರ ಧ್ವನಿ ಒಂದೇ ಮುತಾಲಿಕರೇ ನೀವು ಇಲ್ಲಿ ನಿಂತುಕೊಳ್ಳಬೇಕು ಎಂದಿದ್ದಾರೆ. ಇಲ್ಲಿ ಹಿಂದೂಗಳಿಗೆ ನೋವಾಗಿದೆ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದುತ್ವ ಮತ್ತು ಭ್ರಷ್ಟಾಚಾರ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳು ತತ್ತ್ವ ಸಿದ್ಧಾಂತ ವಿರುದ್ಧ ನನ್ನ ಹೋರಾಟ:ನಾನು ಬಿಜೆಪಿ ಮತ್ತು ಬಿಜೆಪಿ ಸಿದ್ಧಾಂತದ ವಿರೋಧಿ ಅಲ್ಲ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳು ತತ್ತ್ವ ಸಿದ್ಧಾಂತದ ವಿರುದ್ಧ ನನ್ನ ಹೋರಾಟ ಆಗಿದೆ. ಬಿಜೆಪಿ ಅಂದು ಮಾಡಿದ ಅವಮಾನ ಎಂದಿಗೂ ಮರೆಯೋದಿಲ್ಲ. ಹಿಂದುತ್ವ ಪ್ರಾಮಾಣಿಕತೆ ಇದ್ದರೆ, ನನಗೆ ಬಿಜೆಪಿ ಕಾರ್ಕಳದಲ್ಲಿ ಬೆಂಬಲ ಕೊಡಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಸಚಿವ ಸುನೀಲ್ ಕುಮಾರ್ ವಿರುದ್ದ ಮುತಾಲಿಕ್ ಅಸಮಾಧಾನ:ಸಚಿವ ಸುನೀಲ್ ಕುಮಾರ್ ಅವರನ್ನು ನಾನು ಶಿಷ್ಯ ಎಂದು ಹೇಳಲು ಹಿಂದೇಟು ಹಾಕುತ್ತೇನೆ ಎಂದು ಸಚಿವ ಸುನೀಲ್ ಕುಮಾರ್ ವಿರುದ್ದ ಮುತಾಲಿಕ್​​ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು. ’’ಸಚಿವ ಸುನೀಲ್ ಕುಮಾರ್ ಅವರ ವರ್ತನೆ ಭ್ರಮನಿರಸನ ಮೂಡಿಸಿದೆ. ನೀವು ದಾರಿ ತಪ್ಪಿದ್ದೀರಿ ನಿಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರನ್ನು ನೀವು ಮರೆಯಬೇಡಿ. ಒಮ್ಮೆ ಬುದ್ಧಿ ಕಲಿಸಲು, ದಾರಿಗೆ ತರಲು ಈ ಸ್ಪರ್ಧೆ ಮಾಡುತ್ತಿದ್ದೇನೆ. ನಿಜವಾದ ಪ್ರಾಮಾಣಿಕತೆ ಇದ್ದರೆ ನೀವು ಕ್ಷೇತ್ರ ತ್ಯಾಗ ಮಾಡಿ. ಮುತಾಲಿಕ್ ಒಬ್ಬ ಸನ್ಯಾಸಿ, ಬ್ಯಾಂಕ್ ಅಕೌಂಟ್, ಆಸ್ತಿ ಇಲ್ಲ. ಹಿಂದುತ್ವ ಕಾರ್ಯಕರ್ತರು ನನ್ನ ಆಸ್ತಿ, ಭಿಕ್ಷೆ ಬೇಡಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. 10 -100 ರೂಪಾಯಿ ದುಡ್ಡು, ವೋಟು ಕೊಟ್ಟು ಗೆಲ್ಲಿಸಿ‘‘ ಎಂದು ಮನವಿ ಮಾಡಿದರು.

ಸುನೀಲ್ ಸೋಲಬೇಕು ಎಂಬುದು ಎಲ್ಲರ ಅಭಿಪ್ರಾಯ: ’’ಯಾವ ಪ್ರಭಾವಿಗಳೂ ನನ್ನ ಮೇಲೆ ಪ್ರಭಾವ ಬೀರಿಲ್ಲ. ಸುನೀಲ್ ಸೋಲಬೇಕು ಎಂಬುದು ಎಲ್ಲರ ಅಭಿಪ್ರಾಯ. ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ನಾನು ಮೋದಿ - ಯೋಗಿಯ ಆದರ್ಶ ಇಟ್ಟುಕೊಂಡಿದ್ದೇನೆ. ರಾಜ್ಯದಲ್ಲಿ ಹಿಂದುತ್ವ ಅಭಿವೃದ್ಧಿ ಪ್ರಾಮಾಣಿಕತೆಗೆ ಬಿಜೆಪಿ ಅಧಿಕಾರದಲ್ಲಿರಬೇಕು, ಮುತಾಲಿಕ್​ಗೆ ಜಾತಿ ಇಲ್ಲ, ಕಾರ್ಯಕರ್ತರ, ಜನರ ಬಲ‘‘ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಸಿದ್ದರಾಮಯ್ಯ ಟಿಪ್ಪು ಮಾದರಿಯ ಹಿಂದುತ್ವದ ವ್ಯಕ್ತಿ:ಬಿಜೆಪಿಯ ಹಿಂದುತ್ವ ವಿರೋಧಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಉಡುಪಿಯಲ್ಲಿ ಪ್ರಮೋದ್ ಮುತಾಲಿಕ್ ಅಸಮಾಧಾನ ಹೊರ ಹಾಕಿದರು. ’’ಮಾಜಿ ಸಿಎಂ ಸಿದ್ದರಾಮಯ್ಯ ವಿಚಾರ ನಾನು ಒಪ್ಪಲ್ಲ. ಸಿದ್ದರಾಮಯ್ಯ ಟಿಪ್ಪು ಮಾದರಿಯ ಹಿಂದುತ್ವದ ವ್ಯಕ್ತಿ. ಸಿದ್ದರಾಮಯ್ಯ ವೋಟಿನ ಮಾದರಿಯ ಹಿಂದುತ್ವ ಹೊಂದಿದ್ದಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ ವ್ಯಕ್ತಿ. ಸಿಟಿ ರವಿ ಹೇಳುವಂತೆ ಅವರು ಸಿದ್ದರಾಮಯ್ಯ ಅಲ್ಲ, ಸಿದ್ರಾಮುಲ್ಲಾ ಖಾನ್ ಎಂದು ಹೆಸರು ಬದಲಾಯಿಸುವುದು ಸೂಕ್ತ‘‘ ಎಂದು ಸಿದ್ದರಾಮಯ್ಯ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ರಾಮ ಸೇವಾ ಸಂಕಲ್ಪ ಅಭಿಯಾನ ಕೈಗೊಳ್ಳುವಂತೆ ಪ್ರಧಾನಿಗೆ ಪೇಜಾವರ ಶ್ರೀ ಸಲಹೆ

ABOUT THE AUTHOR

...view details