ಉಡುಪಿ:ಕಂಟೈನರ್ನಲ್ಲಿ ಭರ್ಜರಿಯಾಗಿ ಅಕ್ರಮವಾಗಿ ಜಾನುವಾರುಗಳ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಕಂಟೈನರ್ ಸಹಿತ ಕೋಟ ಪೊಲೀಸರು ಬಂಧಿಸಿದ್ದಾರೆ.
ಕಂಟೈನರ್ನಲ್ಲಿದ್ದ 59 ಎಮ್ಮೆ ಕರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ವಿಶೇಷ ರೌಂಡ್ಸ್ನಲ್ಲಿರುವಾಗ ಅಕ್ರಮ ಸಾಗಣೆ ಬಯಲಿಗೆ ಬಂದಿದೆ.
ಸಾಯ್ಬರಕಟ್ಟೆ ಚೆಕ್‌ಪೊಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಶಿರಿಯಾರ ಕಡೆಯಿಂದ ಬಂದ ಕೆಎ 55 ಎ 0244 ನಂಬರ್ನ ಕಂಟೈನರ್ ವಾಹನದಲ್ಲಿ 59 ಎಮ್ಮೆ ಕರುಗಳು ಪತ್ತೆಯಾಗಿವೆ.
ಮೇವು, ನೀರನ್ನು ನೀಡದೇ ಹಿಂಸಾತ್ಮಕ ರೀತಿಯಲ್ಲಿ, ದಾಖಲಾತಿಗಳಿಲ್ಲದೇ ಮಾಂಸ ಮಾಡುವ ಉದ್ದೇಶದಿಂದ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಒಟ್ಟು ಆರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಾದ ಕೇರಳದ ಅಬ್ದುಲ್ ಜಬ್ಬರ್ (35), ಜೋಮನ್ (36), ಶಂಶುದ್ದೀನ್ (34), ಹರಿಯಾಣದ ಮುಖೀಮ್(18) ಬಂಧಿತರು.
ಆರೋಪಿತರಾದ ಅಬ್ದುಲ್ ಅಜೀಜ್, ಕಂಟೈನರ್ ಮಾಲೀಕ ಮೈಸೂರಿನ ರಫೀಕ್ ತಪ್ಪಿಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕುತ್ತಿದ್ದಾರೆ. ಪ್ರಕರಣದಲ್ಲಿ ಒಟ್ಟು 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.