ಕರ್ನಾಟಕ

karnataka

ETV Bharat / state

ಕೈಗಾದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ: ಆರೋಪಿ ಅಂದರ್ - ಉಡುಪಿ ಸುದ್ದಿ

ರಿತೇಶ್ ತಾನು ಕೈಗಾ ಅಣು ಸ್ಥಾವರದಲ್ಲಿ ಕೆಲಸ ಮಾಡಿಕೊಂಡಿದ್ದು, ಸತೀಶ್ ಎಂಬುವರಿಗೆ ಅಕ್ಟೋಬರ್ 1ರಂದು ಕೈಗಾ ಅಣು ಸ್ಥಾವರದಲ್ಲಿ ಕೆಲಸ ಮಾಡಿಕೊಡುವುದಾಗಿ ನಂಬಿಸಿದ್ದ. ಅವರಿಂದ ನಗದು ರೂಪದಲ್ಲಿ 20 ಸಾವಿರ ರೂ. ಪಡೆದಿದ್ದ. ಸದ್ಯ ಪೊಲೀಸರ ಅಥಿತಿಯಾಗಿದ್ದಾನೆ.

udupi
udupi

By

Published : Nov 21, 2020, 9:43 PM IST

ಉಡುಪಿ:ಕೈಗಾ ಅಣು ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಗಟ್ಟಲೆ ಹಣ ಪಡೆದು ವಂಚಿಸಿದ ಆರೋಪಿ ಅಂದರ್ ಆಗಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಅಣು ಸ್ಥಾವರದಲ್ಲಿ ತಾನು ಕೆಲಸ ಕೊಡಿಸುವುದಾಗಿ ಹಣ ಪಡೆದು ಬಹಳಷ್ಟು ಯುವಕರಿಗೆ ಆರೋಪಿ ವಂಚಿಸಿದ್ದ ಎನ್ನಲಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಬೈಂದೂರು ಯಳಜಿತ್ ನಿವಾಸಿಯಾಗಿರುವ ಸತೀಶ್ ಎಂಬುವರಿಗೆ ರಿತೇಶ್ ಪಟ್ವಾಲ್ ಪರಿಚಯವಾಗಿತ್ತು.

ರಿತೇಶ್ ತಾನು ಕೈಗಾ ಅಣು ಸ್ಥಾವರದಲ್ಲಿ ಕೆಲಸ ಮಾಡಿಕೊಂಡಿದ್ದು, ಸತೀಶ್ ಅವರಿಗೆ ಅಕ್ಟೋಬರ್ 1ರಂದು ಕೈಗಾ ಅಣು ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಅವರಿಂದ ನಗದು ರೂಪದಲ್ಲಿ 20 ಸಾವಿರ ರೂ. ಪಡೆದಿದ್ದ.

ಆರೋಪಿ ರಿತೇಶ್ ಪಟ್ವಾಲ್ ಮೂಲತಃ ಬೈಂದೂರು ಪಡುವರಿಯವನಾಗಿದ್ದು, ಈತ ಮಹೇಶ್, ವಿಜಯ್, ಗೌತಮ್, ನಂದೀಶ, ಸಚಿನ್ ಹಾಗೂ ಇತರರಿಗೂ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಅವರಿಂದಲೂ 8 ಲಕ್ಷಕ್ಕೂ ಅಧಿಕ ಹಣವನ್ನು ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ‌‌.

ABOUT THE AUTHOR

...view details