ಉಡುಪಿ: ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಗೋವಿಂದಾಚಾರ್ಯ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಸಂಸ್ಕೃತ ಮತ್ತು ಕನ್ನಡಕ್ಕೆ ಅವರ ಕೊಡುಗೆ ಪ್ರಶಂಸನೀಯ. ಮುಂದಿನ ಪೀಳಿಗೆಗೂ ಅವರ ಕಾರ್ಯಗಳು ಪ್ರಭಾವಕಾರಿ. ಬನ್ನಂಜೆಯವರ ನಿಧನ ಅತೀವ ನೋವು ತಂದಿದೆ. ಅವರ ಕುಟುಂಬಕ್ಕೆ ಭಗವಂತ ನೋವು ಸಹಿಸುವ ಶಕ್ತಿ ನೀಡಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.