ಕರ್ನಾಟಕ

karnataka

ETV Bharat / state

ಪ್ಲಾಸ್ಟಿಕ್ ನಿಷೇಧ ಜಾಗೃತಿ: ಗ್ರಾಮಸ್ಥರ ಗಮನ ಸೆಳೆದ ಮಕ್ಕಳ ಬೀದಿ ನಾಟಕ - Plastic ban awareness due to children's drama

ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕಿನ ಹೇರೂರಿನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಬೀದಿ ನಾಟಕ ಪ್ರಸ್ತುತಪಡಿಸಿ ಜಾಗೃತಿ ಅಭಿಯಾನ ನಡೆಸಿದ್ರು.

Plastic ban awareness in udupi
ವಿದ್ಯಾರ್ಥಿಗಳಿಂದ ಬೀದಿ ನಾಟಕ

By

Published : Dec 18, 2019, 12:54 PM IST

ಭಟ್ಕಳ(ಉತ್ತರ ಕನ್ನಡ):ತಾಲ್ಲೂಕಿನ ಹೇರೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಅಭಿಯಾನ ನಡೆಸಿದ್ರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೀದಿನಾಟಕ, ಘೋಷಣೆಗಳನ್ನು ಕೂಗುವ ಮೂಲಕ ಪ್ಲಾಸ್ಟಿಕ್​ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದ್ರು.

ಪ್ಲಾಸ್ಟಿಕ್ ನಿಷೇಧ ಜಾಗೃತಿ ಸಾರಿದ ವಿದ್ಯಾರ್ಥಿಗಳು

ಸಹ್ಯಾದ್ರಿ ಇಕೋ ಕ್ಲಬ್ ಹಾಗೂ ಎಸ್​ಡಿಎಂಸಿ ನೇತೃತ್ವದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗ್ರಾಮದ ಮನೆಮನೆಗೆ ತೆರಳಿ ಬಟ್ಟೆಚೀಲ ವಿತರಿಸಿದ್ರು.

'ಮೈಕ್ ಇಲ್ಲದ, ಸ್ಟೇಜ್ ಇಲ್ಲದ ನಾಟಕವನ್ನು ನಾವೂ ಮಾಡುವೆವು, ಬದುಕಿಗೆ ಕನ್ನಡಿ ಹಿಡಿಯುವ ಕೆಲಸ ನಾವೆಲ್ಲರೂ ಮಾಡುವೆವು..' ಎಂದು ಹಾಡುತ್ತಾ ಗ್ರಾಮಸ್ಥರಿಗೆ ಪ್ಲಾಸ್ಟಿಕ್​ ನಿಷೇಧಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಶಾಲೆಯ ಮುಖ್ಯಶಿಕ್ಷಕ ಕಮಲಾಕರ ಪಟಗಾರ, ಶಿಕ್ಷಕರಾದ ವಿಜಯಕುಮಾರ ನೆರ್ವೆಕರ, ಸಹಶಿಕ್ಷಕಿ ಎಸ್.ಜಿ.ಆಚಾರಿ, ಗಾಯತ್ರಿ ಮಡಿವಾಳ, ಕವಿತಾ ನಾಯ್ಕ ಈ ವೇಳೆ ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details