ಉಡುಪಿ:ರಾತ್ರಿ ವೇಳೆ ಭೂತ, ಪ್ರೇತಗಳ ಸಂಚಾರ ಮಾಡುತ್ತೆ. ದೆವ್ವ ಇದೆ. ಇವೆಲ್ಲಾ ನಾವು ಕೇಳಿರಿತ್ತೀವಿ ಅದ್ರೆ ಇಲ್ಲಿ ಮಾತ್ರ ಹಗಲಿನಲ್ಲಿ ಎರಡು ಪ್ರೇತಗಳು ದಾರಿ ಉದ್ದಕ್ಕೂ ಸಂಚಾರ ನಡೆಸುತ್ತಾ ಇವೆ. ಈ ಪ್ರೇತಗಳಾವು ಅಂತ ಆಶ್ಚರ್ಯ ಪಡ್ಬೇಡಿ ಇವರು ದಸರಾ ಪ್ರಯುಕ್ತ ನವರಾತ್ರಿಯ ಪ್ರೇತ ವೇಷಧಾರಿಗಳು.
ಹಗಲಿನಲ್ಲಿಯೇ ಕಾಣಿಸಿಕೊಂಡ ಪ್ರೇತಗಳು, ಬೆಚ್ಚಿಬಿದ್ದ ಕೃಷ್ಣ ನಗರಿ ಮಂದಿ...! - ನವರಾತ್ರಿಯ ಪ್ರೇತ ವೇಷಧಾರಿಗಳು
ದಸರಾ ಪ್ರಯುಕ್ತ ವಿವಿಧ ವೇಷಧರಿಸಿ ಜನರು ರಸ್ತೆ ಉದ್ದಕ್ಕೂ ಮೆರವಣಿಗೆ ತೆರಳುವುದು ಸಾಮಾನ್ಯ. ಹಾಗೆ ಪ್ರೇತ ವೇಷಧಾರಿಗಳು ಕಾರ್ಕಳದಲ್ಲಿ ರಸ್ತೆಯಲ್ಲಿ ತಿರುಗಾಡಿದ್ದು ಅಲ್ಲಿದ್ದ ಸಾರ್ವಜನಿಕರನ್ನು ಕ್ಷಣಕಾಲ ನಿಬ್ಬೆರಗಾಗಿಸಿತ್ತು.
ಹಗಲಿನಲ್ಲಿಯೇ ಕಾಣಿಸಿಕೊಂಡ ಪ್ರೇತಗಳು...!
ಹೌದು, ನವರಾತ್ರಿ ಆರಂಭವಾಗುತ್ತಿದ್ದಂತೆ ಜನರು ವಿವಿಧ ವೇಷ ಧರಿಸಿ ರಸ್ತೆ ಉದ್ದಕ್ಕೂ ಮೆರವಣಿಗೆ ತೆರಳುವುದು ಸಾಮಾನ್ಯ. ಹಾಗೆ ಈ ನವರಾತ್ರಿಯ ವೇಷಧಾರಿಗಳು ಈ ಬಾರಿ ವಿಭಿನ್ನ ವೇಷಧರಿಸಿ ರಸ್ತೆಯಲ್ಲಿ ತಿರುಗಾಡಿದ್ದು, ದಿಢೀರ್ ಹತ್ತಿರದಿಂದ ಪ್ರೇತ ವೇಷಧಾರಿಗಳನ್ನು ಕಂಡು ಅದೆಷ್ಟೋ ಮಂದಿ ಹೆದರಿದ್ದಂತು ಸುಳ್ಳಲ್ಲ.