ಕರ್ನಾಟಕ

karnataka

ETV Bharat / state

ಕೊರೊನಾ ಜೊತೆಗೆ ಮತ್ತೊಂದು ಅಪಾಯಕಾರಿ 'ಸೋಂಕು' ಸಕ್ರಿಯ: ಬ್ಯಾಂಕ್​​ ಗ್ರಾಹಕರೇ ಎಚ್ಚರ! - ಕೊರೊನಾ ಫಂಡ್​​ ಹೆಸರಲ್ಲಿ ಬ್ಯಾಂಕ್​ ಅಕೌಂಟ್​​ಗೆ ಖನ್ಣಾ

ಕೊರೊನಾ ಬಿಕ್ಕಟ್ಟನ್ನೇ ಬಂಡವಾಳ ಮಾಡಿಕೊಂಡು ಬ್ಯಾಂಕ್​ ಅಕೌಂಟ್​​ನಿಂದ ಹಣ ಲಪಟಾಯಿಸುವ ವಂಚಕ ಜಾಲವೊಂದು ಹುಟ್ಟಿಕೊಂಡಿದೆ.

people fraud your account in the name of corona relief fund
ಬ್ಯಾಂಕ್​​ ಗ್ರಾಹಕರೇ ಎಚ್ಚರ

By

Published : Apr 9, 2020, 8:35 PM IST

ಉಡುಪಿ:ಕೊರೊನಾ ಜೊತೆಗೆ ಮತ್ತೊಂದು ಅಪಾಯಕಾರಿ ಸೋಂಕು ಸಕ್ರಿಯವಾಗಿದೆ. ಬ್ಯಾಂಕ್‌ನ ಅಕೌಂಟ್‌ನಿಂದ ಹಣ ಎಗರಿಸುವ ಜಾಲ ವೇ ಇದು.

ಬ್ಯಾಂಕ್ ಆಫ್ ಬರೋಡಾ ಉಡುಪಿ ಬ್ರಾಂಚ್‌ನ ಡಿಜಿಎಂ ರವೀಂದ್ರ ರೈ, ಬ್ಯಾಂಕ್ ಫ್ರಾಡ್ ಬಗ್ಗೆ ಸೆಲ್ಫಿ ವಿಡಿಯೋ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಬ್ಯಾಂಕ್​​ ಗ್ರಾಹಕರೇ ಎಚ್ಚರ! ಇದು ನಿಮಗೆ ತಿಳಿದಿರಲಿ..
ನಿಮ್ಮ ಮೊಬೈಲ್​​ಗೆ ಅನಾಮಿಕ ಕರೆಯೊಂದು ಬರುತ್ತೆ. ಕೊರೊನಾ ಸಂಕಷ್ಟ ಪರಿಹಾರ ಹಣ ನೀಡ್ತೇವೆ. ನಿಮ್ಮ ಒಟಿಪಿ ನಂಬರ್ ಕೊಡಿ, ತಕ್ಷಣ ಹಣ ಹಾಕ್ತೀವಿ ಅಂತಾರೆ. ಒಟಿಪಿ ಕೊಟ್ಟ ತಕ್ಷಣ ನಿಮ್ಮ ಅಕೌಂಟ್ ಖಾಲಿಯಾಗುತ್ತೆ.! ಇದು ಇಷ್ಟಕ್ಕೆ ನಿಲ್ಲೊಲ್ಲ..
ಬಳಿಕ ಮೂರು ತಿಂಗಳು ನಿಮ್ಮ ಲೋನ್ ಇಎಂಐ ತೆಗೆಯಲ್ಲ ಅಂತ ನಂಬಿಕೆ ಹುಟ್ಟಿಸುತ್ತಾರೆ. ಲೋನ್ ನೆಪದಲ್ಲೂ ಒಟಿಪಿ ಕೇಳ್ತಾರೆ. ಯಾವ ಬ್ಯಾಂಕ್ ಕೂಡಾ ಒಟಿಪಿ, ಪಿನ್ ನಂಬರ್ ಕೇಳಲ್ಲ. ಒಟಿಪಿ, ಪಿನ್‌ ಯಾರ ಬಳಿಯೂ ಶೇರ್ ಮಾಡ್ಬೇಡಿ ಅಂತಾ ಬ್ಯಾಂಕ್‌ಗಳ ಗ್ರಾಹಕರಿಗೆ ರವೀಂದ್ರ ರೈ ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details