ಕರ್ನಾಟಕ

karnataka

ETV Bharat / state

ಉಡುಪಿ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ರೆಡ್​ ಅಲರ್ಟ್​: ತೋಟ, ಗದ್ದೆ, ಮನೆಗಳು ಜಲಾವೃತ, ಜನಜೀವನ‌ ಅಸ್ತವ್ಯಸ್ತ - ಉಡುಪಿಯಲ್ಲಿ ಧಾರಾಕಾರ ಮಳೆ

ಉಡುಪಿ ಜಿಲ್ಲೆಯಲ್ಲಿ ಅಬ್ಬರಿಸುತ್ತಿರುವ ವರುಣ.. ತುಂಬಿ ಹರಿಯುತ್ತಿರುವ ನದಿಗಳು- ತೋಟ, ಗದ್ದೆ ಹಾಗೂ ಮನೆಗಳು ಜಲಾವೃತ- ಜಿಲ್ಲಾಡಳಿತದಿಂದ ಮತ್ತೆರಡು ದಿನ ರೆಡ್ ಅಲರ್ಟ್ ಘೋಷಣೆ

ಉಡುಪಿ
ಉಡುಪಿ

By

Published : Jul 10, 2022, 3:37 PM IST

ಉಡುಪಿ: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಈ ಹಿನ್ನೆಲೆ ಬೈಂದೂರು ತಾಲೂಕಿನ ನಾವುಂದ ಸಾಲ್ಬುಡಕ್ಕೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿ ನೆರೆ ಪ್ರದೇಶವನ್ನು ವೀಕ್ಷಿಸಿದ್ದಾರೆ.

ಶಾಸಕ ಸುಕುಮಾರ ಶೆಟ್ಟಿ ಮಾತನಾಡಿದರು

ಡಿಸಿ ಕೂರ್ಮಾರಾವ್, ಸಿಇಒ ಪ್ರಸನ್ನ ಕುಮಾರ್, ಎಸಿ ರಾಜು ಆಗಮಿಸಿ ನೆರೆ ಪೀಡಿತ ಪ್ರದೇಶದ ಮನೆಗಳಿಗೆ ದಿನಸಿ ಹಂಚಿಕೆ ಮಾಡಿದರು. ಸುಮಾರು ನೂರಕ್ಕೂ ಹೆಚ್ಚು ಮನೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿದ್ರು. ವೈಯಕ್ತಿಕ ದಿನಸಿ ಹಂಚಿಕೆ ಮಾಡಿ ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಮನೆಯಲ್ಲಿ ವೃದ್ಧರು, ಮಕ್ಕಳು ನಾಲ್ಕು ದಿನಗಳಿಂದ ಹೊರಬರದ ಸ್ಥಿತಿಯಲ್ಲಿದ್ದಾರೆ. ಈಗಾಗಲೇ ದೋಣಿ, ಲೈಫ್ ಜಾಕೆಟ್​ಗಳನ್ನು ಪೂರೈಕೆ ಮಾಡಲಾಗಿದೆ. ಜನ ಆತಂಕಪಡುವ ಅಗತ್ಯ ಇಲ್ಲ. ನೆರೆಯ ಮಟ್ಟ ಬಹಳಷ್ಟು ಇಳಿಕೆ ಆಗುತ್ತಿದೆ. ಭತ್ತದ ಬೆಳೆ ನಾಶ ಆಗಿದ್ದಕ್ಕೆ ಸೂಕ್ತ ಪರಿಹಾರ ಕೊಡಲಾಗುವುದು ಎಂದು ಭರವಸೆ ನೀಡಿದ್ರು.

ದಿನಸಿ ಹಂಚಿಕೆ

ಮತ್ತೆರಡು ದಿನ ರೆಡ್ ಅಲರ್ಟ್: ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮುಂಗಾರು ಆರ್ಭಟ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ನದಿಗಳು ತುಂಬಿ ಹರಿಯುತ್ತಿದ್ದು, ತೋಟ, ಗದ್ದೆ ಹಾಗೂ ಮನೆಗಳು ಜಲಾವೃತವಾಗಿವೆ. ಈ ಹಿನ್ನೆಲೆ ಜಿಲ್ಲಾಡಳಿತ ಮತ್ತೆರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ನೆರೆಪೀಡಿತ ಜನರಿಗೆ ದಿನಸಿ ಹಂಚಿಕೆ

ಬ್ರಹ್ಮಾವರದಲ್ಲಿ ಸ್ವರ್ಣಾ ನದಿ ತುಂಬಿ ಹರಿಯುತ್ತಿದ್ದು ಆರೂರು, ಹಾವಂಜೆ, ಚೇರ್ಕಾಡಿ, ಹೇರೂರು ಕುಂಜಾಲು ಸುತ್ತಮುತ್ತಲ ಜಮೀನುಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದೆ. ಕಿಂಡಿ ಅಣೆಕಟ್ಟು ನದಿ ಸುತ್ತಮುತ್ತಲ ಜಮೀನಿಗೆ ನುಗ್ಗಿರುವ ನೀರಿನ ದೃಶ್ಯಾವಳಿಯನ್ನು ಡ್ರೋನ್ ಕ್ಯಾಮರಾದಲ್ಲಿ ರಕ್ಷಿತ್ ನಾಯಕ್ ಎಂಬುವರು ಸೆರೆ ಹಿಡಿದಿದ್ದಾರೆ.

ಓದಿ:ಕೆಆರ್​ಎಸ್ ಜಲಾಶಯದಿಂದ ಕಾವೇರಿ ನದಿಗೆ 25 ಸಾವಿರ ಕ್ಯೂಸೆಕ್​​ ನೀರು ಬಿಡುಗಡೆ

ABOUT THE AUTHOR

...view details