ಉಡುಪಿ: ಸಾರ್ವಜನಿಕ ಚರಂಡಿ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿದ್ದ ಪೆಟ್ರೋಲ್ ಬಂಕ್ ಮಾಲೀಕನಿಗೆ ತಕ್ಕ ಶಾಸ್ತಿ ಮಾಡಿದ ಜನರು, ಕಾಂಪೌಂಡ್ನ್ನು ನೆಲಸಮಗೊಳಿಸಿ ಪಾಠ ಕಲಿಸಿದ್ದಾರೆ.
ಸಾರ್ವಜನಿಕ ಚರಂಡಿ ಮೇಲೆ ಕಾಂಪೌಂಡ್ ನಿರ್ಮಾಣ... ಆಕ್ರೋಶಗೊಂಡ ಜನರಿಂದ ಉಡೀಸ್ - Kannada news
ಸರ್ಕಾರಿ ರಜೆ ಇರುವ ದಿನ ನೋಡಿ ಪೆಟ್ರೋಲ್ ಬಂಕ್ ಮಾಲೀಕ ಚರಂಡಿ ಮೇಲೆ ಕಾಂಪೌಂಡ್ ನಿರ್ಮಾಣದ ಪ್ಲಾನ್ ಮಾಡಿದ್ದ. ಮಳೆಗಾಲದಲ್ಲಿ ನಿರಂತರವಾಗಿ ನೀರು ಹರಿದು ಹೋಗುವ ಸಾರ್ವಜನಿಕ ಚರಂಡಿ ಮೇಲೆ ಈ ಕಾಂಪೌಂಡ್ ನಿರ್ಮಾಣ ಮಾಡಲಾಗಿತ್ತು.
ಸಾರ್ವಜನಿಕ ಚರಂಡಿ ಮೇಲೆ ಕಂಪೌಂಡ್ ನಿರ್ಮಾಣ
ನಗರಸಭೆ ವ್ಯಾಪ್ತಿಯ ಗುಂಡಿಬೈಲು 12 ನೇ ಅಡ್ಡ ರಸೆಯಲ್ಲಿ ಸರ್ಕಾರಿ ರಜೆ ಇರುವ ದಿನ ನೋಡಿ ಪೆಟ್ರೋಲ್ ಬಂಕ್ ಮಾಲೀಕ ಚರಂಡಿ ಮೇಲೆ ಕಾಂಪೌಂಡ್ ನಿರ್ಮಾಣದ ಪ್ಲಾನ್ ಮಾಡಿದ್ದ. ಮಳೆಗಾಲದಲ್ಲಿ ನಿರಂತರವಾಗಿ ನೀರು ಹರಿದು ಹೋಗುವ ಸಾರ್ವಜನಿಕ ಚರಂಡಿ ಮೇಲೆ ಈ ಕಾಂಪೌಂಡ್ ನಿರ್ಮಾಣ ಮಾಡಲಾಗಿತ್ತು.
ಸಾರ್ವಜನಿಕ ಚರಂಡಿ ಬಂದ್ ಆದ್ರೆ ಮಳೆಗಾಲದಲ್ಲಿ ನೀರಿನ ಹರಿವಿಗೆ ಅಡಚಣೆಯಾಗುತ್ತೆ. ಇದರಿಂದ ಅಕ್ರೋಶಗೊಂಡ ಸ್ಥಳೀಯರು ಕಾಂಪೌಂಡ್ ಕೆಡವಿ ಆಕ್ರೋಶ ವ್ಯಕ್ತಪಡಿಸಿದರು.