ಕರ್ನಾಟಕ

karnataka

ETV Bharat / state

ಆಂಧ್ರದ ಹಿಂದೂ ದೇವಾಲಯಗಳನ್ನು ಸಂರಕ್ಷಿಸುವಂತೆ ಅಮಿತಾ ಶಾಗೆ ಪೇಜಾವರ ಶ್ರೀ ಪತ್ರ

ರಾಮತೀರ್ಥ ಕ್ಷೇತ್ರ ಸುಮಾರು 600 ವರ್ಷಗಳ‌ ಇತಿಹಾಸವಿರುವ ದೇವಾಲಯ. ರಾಮ ದೇವರು ಯಾತ್ರಾ ಕಾಲದಲ್ಲಿ ನೆಲೆಸಿದ್ದ ಅನ್ನೋ ಇತಿಹಾಸ ಅದಕ್ಕಿದೆ. ಇಂತಹ ಇತಿಹಾಸವಿರೋ ದೇವಾಲಯವನ್ನು ನಾಶಗೊಳಿಸಲಾಗಿದೆ.

ಪೇಜಾವರ ಶ್ರೀ
ಪೇಜಾವರ ಶ್ರೀ

By

Published : Jan 18, 2021, 8:00 PM IST

ಉಡುಪಿ: ಮೂರ್ತಿ ಧ್ವಂಸಕ್ಕೆ ಒಳಗಾದ ಪವಿತ್ರ ಸ್ಥಳ ಆಂಧ್ರ ಪ್ರದೇಶದ ರಾಮತೀರ್ಥ ಕ್ಷೇತ್ರಕ್ಕೆ ಪೇಜಾವರ ಶ್ರೀ ಭೇಟಿ ನೀಡಿದ್ದು, ಆಂಧ್ರದಲ್ಲಿನ ಹಿಂದೂ ವಿರೋಧಿ ಕೃತ್ಯಗಳ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಅಮಿತ್ ಶಾ ಅವರಿಗೆ ಪೇಜಾವರ ಶ್ರೀ ಪತ್ರ ಬರೆದಿದ್ದಾರೆ.

ಆಂಧ್ರದ ರಾಮತೀರ್ಥಕ್ಕೆ ಭೇಟಿ ನೀಡಿದ ಪೇಜಾವರ ಶ್ರೀ

ರಾಮತೀರ್ಥ ಕ್ಷೇತ್ರ ಸುಮಾರು 600 ವರ್ಷಗಳ‌ ಇತಿಹಾಸವಿರುವ ದೇವಾಲಯ. ರಾಮ ದೇವರು ಯಾತ್ರಾ ಕಾಲದಲ್ಲಿ ನೆಲೆಸಿದ್ದ ಅನ್ನೋ ಇತಿಹಾಸ ಅದಕ್ಕಿದೆ. ಇಂತಹ ಇತಿಹಾಸವಿರುವ ದೇವಾಲಯವನ್ನು ನಾಶಗೊಳಿಸಲಾಗಿದೆ. ಆಂಧ್ರ ಪ್ರದೇಶದಲ್ಲಿ ಹಿಂದೂಗಳ‌ ಅನೇಕ ದೇವಾಲಯಗಳ ಮೇಲೆ ಹಾನಿ ಮಾಡುವ ಕೆಲಸ ನಿರಂತರವಾಗಿ ಆಗುತ್ತಿದೆ. ಇಂತಹ ದೌರ್ಜನ್ಯ ಖಂಡನೀಯ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಅಮಿತಾ ಶಾಗೆ ಪೇಜಾವರ ಶ್ರೀಗಳು ಬರೆದ ಪತ್ರ

ಘಟನೆ ನಡೆದು 20 ದಿನಗಳಾದ್ರೂ ಯಾವುದೇ ಕ್ರಮ ಆಗದೇ ಇರೋದನ್ನು ಪೇಜಾವರ ಶ್ರೀಗಳು ಖಂಡಿಸಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಹಿಂದೂ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ದೇಶದ ಗೃಹಮಂತ್ರಿ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದಾರೆ.

ABOUT THE AUTHOR

...view details