ಕರ್ನಾಟಕ

karnataka

ETV Bharat / state

ಪೇಜಾವರ ಶ್ರೀಗಳಿಂದ ಅಯೋಧ್ಯೆಯ ರಾಮಲಲ್ಲಾ ಮೂರ್ತಿಗೆ ಚಾಮರಸೇವೆ - Chamaraseva

ಪೇಜಾವರ ಮಠಾಧೀಶ ಅಯೋಧ್ಯೆ ಶ್ರೀರಾಮ ಮಂದಿರ ದೇವಸ್ಥಾನದ ಟ್ರಸ್ಟಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಕಾಮಗಾರಿಯ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶ್ರೀರಾಮ ದೇವರ ತಾತ್ಕಾಲಿಕ ಗುಡಿಗೆ ಭೇಟಿ ನೀಡಿ ರಾಮ ಲಲ್ಲಾನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

udupi
ಪೇಜಾವರ ಶ್ರೀಗಳಿಂದ ರಾಮಲಲ್ಲಾ ಮೂರ್ತಿಗೆ ಚಾಮರಸೇವೆ

By

Published : Nov 4, 2020, 6:50 AM IST

Updated : Nov 4, 2020, 6:57 AM IST

ಅಯೋಧ್ಯೆ/ಉಡುಪಿ:ಪೇಜಾವರ ಮಠಾಧೀಶ ಅಯೋಧ್ಯೆ ಶ್ರೀ ರಾಮ ಮಂದಿರ ದೇವಸ್ಥಾನದ ಟ್ರಸ್ಟಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಮಲಲ್ಲಾ ಮೂರ್ತಿಗೆ ಚಾಮರಸೇವೆ ನಡೆಸಿದ್ದಾರೆ.

ಪೇಜಾವರ ಶ್ರೀಗಳಿಂದ ರಾಮಲಲ್ಲಾ ಮೂರ್ತಿಗೆ ಚಾಮರಸೇವೆ

ರಾಮಮಂದಿರ ನಿರ್ಮಾಣದ ಕಾಮಗಾರಿಯ ಪರಿಶೀಲನೆ ನಡೆಸಿರುವ ಶ್ರೀಗಳು, ಶ್ರೀರಾಮ ದೇವರ ತಾತ್ಕಾಲಿಕ ಗುಡಿಗೆ ಭೇಟಿ ಕೊಟ್ಟರು. ಈ ಸಂದರ್ಭ ರಾಮಲಲ್ಲಾ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀರಾಮಚಂದ್ರನ ಮೂರ್ತಿಗೆ ಚಾಮರ ಸೇವೆಯನ್ನು ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ದೇಗುಲದಲ್ಲಿ ನಡೆಯುವ ಪೂಜೆ ಪುನಸ್ಕಾರ, ಸಂಪ್ರದಾಯಗಳ ಬಗ್ಗೆ ಮಾಹಿತಿ ನೀಡಿದರು.

ನಂತರ ರಾಮಲಲ್ಲಾನ ಮಂಗಳಾರತಿಯಲ್ಲಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಪಾಲ್ಗೊಂಡರು. ಉಡುಪಿಯಿಂದ ಉತ್ತರ ಭಾರತ ಪ್ರವಾಸ ತೆರಳಿದ್ದ ಸ್ವಾಮೀಜಿ ಒಟ್ಟು ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಕಾರ್ಯ ಪರಿಶೀಲನೆಯನ್ನು ನಡೆಸಿ ಅಯೋಧ್ಯೆಯಿಂದ ಹೊರಟಿದ್ದಾರೆ.

Last Updated : Nov 4, 2020, 6:57 AM IST

ABOUT THE AUTHOR

...view details