ಉಡುಪಿ:ಉಡುಪಿ-ಮಂಗಳೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ಸೊಂದು ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಅಪಾಯಕಾರಿ ರೀತಿಯಲ್ಲಿ ಹೇರಿಕೊಂಡು ಸಂಚಾರ ನಡೆಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿಯ ಖಾಸಗಿ ಬಸ್ಸೊಂದರಲ್ಲಿ ನೇತಾಡುತ್ತಿರುವ ಪ್ರಯಾಣಿಕರು: ವಿಡಿಯೋ ವೈರಲ್ ವಿಡಿಯೋದಲ್ಲಿ ಎಕೆಎಂಎಸ್ ಹೆಸರಿನ ಬಸ್ಸು ಉಡುಪಿಯಿಂದ ಮಂಗಳೂರು ನಡುವೆ ಸಂಚರಿಸುವ ಕೊನೆಯ ಬಸ್ಸಾಗಿದ್ದು. ರಾತ್ರಿ ಸುಮಾರು 9:30 ರ ಸುಮಾರಿಗೆ ಉಡುಪಿಯಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಮಂಗಳೂರಿನತ್ತ ಸಾಗಿದೆ. ಆದರೆ ಬಸ್ಸಿನಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಸ್ಸಿನ ಫುಟ್ ಬೋರ್ಡ್ ಹಾಗೂ ಹಿಂಬದಿಯ ಏಣಿಯಲ್ಲಿ ನೇತಾಡಿಕೊಂಡು ಹೋಗಿರುವುದು ಕಂಡು ಬಂದಿದೆ.
ಪ್ರಯಾಣಿಕರಿಗೆ ನಿಲ್ಲಲು ಜಾಗವಿಲ್ಲದೇ ಎಕೆಎಂಎಸ್ ವೇಗದೂತ ಬಸ್ಸಿನ ನಿರ್ವಾಹಕನು ಬೇರೊಂದು ಬಸ್ಸನ್ನು ಹತ್ತಿಕೊಂಡು ಈ ಬಸ್ಸನ್ನು ಹಿಂಬಾಲಿಸಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೆ ಪೊಲೀಸರ ಗಮನಕ್ಕೆ ಬಂದಿದೆ. ಬಸ್ ಮಾಲೀಕರಿಗೆ ಕೋರ್ಟ್ ನೋಟಿಸ್ ನೀಡಿದೆ. ಈ ಘಟನೆ ಯಾವಾಗ ನಡೆಯಿತು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿರುವುದರಿಂದ ಕಾನೂನು ಕ್ರಮ ಜರುಗಿಸಲಾಗಿದೆ.
ಇನ್ನು ಬಸ್ ಮಾಲೀಕನಿಗೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಲಾಗುತ್ತದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಸದ್ಯ ಪೊಲೀಸರು ಬಸ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.