ಕರ್ನಾಟಕ

karnataka

ETV Bharat / state

ಉಡುಪಿ: ಕಾರ್ಕಳ‌ ಮೂಲದ ವ್ಯಕ್ತಿಗೆ ಕೊರೊನಾ ಶಂಕೆ, ತೀವ್ರ ನಿಗಾ - ಉಡುಪಿ

ಇಸ್ರೇಲ್​ನಿಂದ ಆಗಮಿಸಿರುವ ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಕೊರೊನಾ‌ ಶಂಕೆ ವ್ಯಕ್ತವಾಗಿದ್ದು, ಆತನನ್ನ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

One suspect corona case
ಕಾರ್ಕಳ‌ ಮೂಲದ ವ್ಯಕ್ತಿಗೆ ಕೊರೊನಾ ಶಂಕೆ

By

Published : Mar 5, 2020, 9:02 AM IST

ಉಡುಪಿ: ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಕೊರೊನಾ‌ ಶಂಕೆ ವ್ಯಕ್ತವಾಗಿದ್ದು, ತೀವ್ರ ನಿಗಾದಲ್ಲಿ ಇರಿಸಲಾಗಿದೆ.

ಇಸ್ರೇಲ್​ಗೆ ಕುಟುಂಬದವರ ಜೊತೆ ಹೋಗಿದ್ದ ಶಂಕಿತ ವ್ಯಕ್ತಿಗೆ ಇಸ್ರೇಲ್​ನಿಂದ ಬರುವಾಗಲೇ ಶೀತ, ಕೆಮ್ಮು ಕಂಡು ಬಂದಿದೆ. ಎರಡು ದಿನದ ಹಿಂದೆ ಶೀತ ಕೆಮ್ಮು ಕಂಡು ಬಂದಿದ್ದು,

ಮಂಗಳೂರು‌ ವಿಮಾನ ನಿಲ್ದಾಣದಿಂದ ಖಾಸಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಕುಟುಂಬಸ್ಥರಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ. ವ್ಯಕ್ತಿಯ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details