ಉಡುಪಿ:ವೃದ್ಧೆಯೊರ್ವರು ತಾವು ವಾಸಿಸುತ್ತಿದ್ದ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಮೂಲದ ಗಂಗಮ್ಮ (70) ಮೃತ ವೃದ್ಧೆಯಾಗಿದ್ದಾರೆ. ನಗರದ ಬಿಗ್ ಬಜಾರ್ ಸನಿಹದಲ್ಲಿರುವ ಮಗನ ಮನೆಯಲ್ಲಿ ಕೆಲವು ತಿಂಗಳುಗಳಿಂದ ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿ ನಂತರ ಗುಣಮುಖರಾಗಿದ್ದರು. ಇವರ ಪತಿಯು ಕೊರೊನಾ ಪಾಸಿಟಿವ್ ಇರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.