ಉಡುಪಿ: ಜಿಲ್ಲೆಯ ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ಮಂಗಳವಾರ ಬ್ರೇಕ್ ಬಿದ್ದಿದೆ. ಸೋಮವಾರದವರೆಗೆ 947 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ಬಹುತೇಕ ಮಹಾರಾಷ್ಟ್ರದಿಂದ ಹಿಂದುರಿಗಿದ ಜನರಿಗೆ ಕೋವಿಡ್-19 ತಗುಲಿದೆ.
ಉಡುಪಿಯಲ್ಲಿ ಒಂದೂ ಪಾಸಿಟಿವ್ ಕೇಸ್ ಇಲ್ಲ... ಕೊಂಚ ನೆಮ್ಮದಿ ತಂದ ಮಂಗಳವಾರ! - ಉಡುಪಿ ಕೊರೊನಾ ವೈರಸ್ ಪ್ರಕರಣ
ಉಡುಪಿ ಜನರ ಪಾಲಿಗೆ ಮಂಗಳವಾರವು ಶುಭದಿನವಾಗಿ ಪರಿಣಮಿಸಿದೆ. 25 ದಿನಗಳ ಬಳಿಕ ಜಿಲ್ಲೆಯಲ್ಲಿ ಶೂನ್ಯ ಕೇಸ್ ವರದಿಯಾಗಿರುವುದು ಜಿಲ್ಲೆಯ ಜನತೆಗೆ ಕೊಂಚ ನೆಮ್ಮದಿ ತಂದ ದಿನವಾಗಿದೆ.
ಉಡುಪಿ
ಇಲ್ಲಿಯವರೆಗೆ ಸೋಂಕಿತರ ಪೈಕಿ 234 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಈಗ 712 ಪಾಸಿಟಿವ್ ಪ್ರಕರಣಗಳು ಸಕ್ರಿಯವಾಗಿವೆ. ಮುಂಬೈನಿಂದ ಮರಳಿದವರ ಬಹುತೇಕ ಪರೀಕ್ಷಾ ವರದಿಗಳು ಮುಕ್ತಾಯಗೊಂಡಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಉಡುಪಿ ಜನರ ಪಾಲಿಗೆ ಮಂಗಳವಾರವು ಶುಭದಿನವಾಗಿ ಪರಿಣಮಿಸಿದೆ. 25 ದಿನಗಳ ಬಳಿಕ ಜಿಲ್ಲೆಯಲ್ಲಿ ಶೂನ್ಯ ಕೇಸ್ ವರದಿಯಾಗಿರುವುದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಜಿಲ್ಲೆಯ ಜನತೆಗೆ ಕೊಂಚ ನೆಮ್ಮದಿ ತಂದ ದಿನವಾಗಿದೆ.