ಉಡುಪಿ: ನಾಡಿನಾದ್ಯಂತ ಇಂದು ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯುತ್ತಿದೆ. ಆದರೆ ಉಡುಪಿಯಲ್ಲಿ ಸೌರಮಾನ ಪಂಚಾಂಗ ಅನುಸರಣೆ ಹಿನ್ನೆಲೆ ಇಂದು ಶ್ರೀಕೃಷ್ಣ ಮಠದಲ್ಲಿ ಅಷ್ಟಮಿ ಆಚರಣೆ ನಡೆಸುತ್ತಿಲ್ಲ.
ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಇಲ್ಲ - Udupi
ಸೌರಮಾನ ಪಂಚಾಂಗ ಅನುಸರಣೆ ಹಿನ್ನೆಲೆ ಇಂದು ಶ್ರೀಕೃಷ್ಣ ಮಠದಲ್ಲಿ ಅಷ್ಟಮಿ ಆಚರಣೆ ಇರುವುದಿಲ್ಲ. ಅಲ್ಲದೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕೃಷ್ಣ ಮಠ ಪ್ರವೇಶಕ್ಕೆ ಅವಕಾಶ ಇಲ್ಲ.
![ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಇಲ್ಲ Udupi Krishnamatha](https://etvbharatimages.akamaized.net/etvbharat/prod-images/768-512-8373767-886-8373767-1597118918915.jpg)
ಕೃಷ್ಣ ಮಠದಲ್ಲಿ ಸೆ. 10ರಂದು ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಈ ಬಾರಿ ಎರಡು ಜನ್ಮಾಷ್ಟಮಿ ಅಚರಣೆ ನಡೆಯಲಿದ್ದು, ಆ. 11ರಂದು ಚಾಂದ್ರಮಾನ, ಸೆ. 10ರಂದು ಸೌರಮಾನ ಆಚರಣೆ ನಡೆಯಲಿದೆ. ಸೌರಮಾನ ಪಂಚಾಂಗ ಅನುಸರಣೆ ಹಿನ್ನೆಲೆ ಇಂದು ಶ್ರೀಕೃಷ್ಣ ಮಠದಲ್ಲಿ ಅಷ್ಟಮಿ ಆಚರಣೆ ಇರುವುದಿಲ್ಲ. ಅಲ್ಲದೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕೃಷ್ಣ ಮಠ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ಇಲ್ಲ.
ಸೆ. 10ರಂದು ಮಧ್ಯರಾತ್ರಿ 12.15 ಗಂಟೆಗೆ ಚಂದ್ರೋದಯ ಸಮಯದಲ್ಲಿ ಶ್ರೀಕೃಷ್ಣ ಮಠದ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಸೆ. 11ರಂದು ಶ್ರೀಕೃಷ್ಣ ಲೀಲೋತ್ಸವ ನಡೆಸಲಾಗುತ್ತದೆ ಎಂಬ ಮಾಹಿತಿ ಮಠದ ಮೂಲಗಳಿಂದ ತಿಳಿದು ಬಂದಿದೆ.