ಕರ್ನಾಟಕ

karnataka

By

Published : Jul 11, 2020, 10:13 PM IST

ETV Bharat / state

ಉಡುಪಿಯಲ್ಲಿ ಎಎಸ್​ಐ ಸೇರಿ 90 ಜನರಿಗೆ ಕೊರೊನಾ: ಕಾಪು ಪೊಲೀಸ್​​ ಠಾಣೆ ಸೀಲ್​ಡೌನ್

ಉಡುಪಿ ಜಿಲ್ಲೆಯಲ್ಲಿಂದು 90 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರ ಪೈಕಿ ಓರ್ವ ಎಎಸ್​​ಐ ಸೇರಿದ್ದು ಕಾಪು ಪೊಲೀಸ್​ ಠಾಣೆಯನ್ನು ಸೀಲ್​ಡೌನ್​ ಮಾಡಲಾಗಿದೆ.

ninety-corona-cases-found-in-udupi
ಕಾಪು ಪೊಲೀಸ್​​ ಠಾಣೆ ಸೀಲ್ ಡೌನ್

ಉಡುಪಿ: ಕಾಪು ಪೊಲೀಸ್​ ಠಾಣೆಯ ಎಎಸ್​ಐ ಸೇರಿ ಜಿಲ್ಲೆಯಲ್ಲಿಂದು 90 ಜನರ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,567ಕ್ಕೆ ಏರಿಕೆಯಾಗಿದೆ.

ಎಎಸ್​ಐಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಠಾಣೆಯನ್ನು ಸಂಪೂರ್ಣವಾಗಿ ಸೀಲ್​ಡೌನ್ ಮಾಡಲಾಗಿದೆ. ತಾತ್ಕಾಲಿಕವಾಗಿ ಠಾಣೆಯನ್ನು ವೀರಭದ್ರ ದೇವಸ್ಥಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಮುಂದಿನ 48 ಗಂಟೆಗಳ ಕಾಲ ಠಾಣೆ ಸೀಲ್​ಡೌನ್​ ಆಗಿರಲಿದ್ದು, ಸ್ಯಾನಿಟೈಸ್ ಮಾಡುವ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ ಎಸ್​ಐ ಕೋಟದಿಂದ ಬಸ್ ಮೂಲಕ ಪ್ರತಿದಿನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಜಿಲ್ಲೆಯಲ್ಲಿ ಇಂದು 21 ಕೋವಿಡ್​ ಸೋಂಕಿತರು ಗುಣಮುಖರಾಗಿದ್ದು, 319 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್​ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details