ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ದೇಗುಲಗಳಲ್ಲೊಂದಾದ ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.
ಮೂಕಾಂಬಿಕಾ ದೇವಳದ ಪ್ರಾಂಗಣದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ಉತ್ಸವವನ್ನು ನಡೆಸಲಾಯಿತು. ಶುಕ್ರವಾರ ಬೆಳಗ್ಗೆ ಚಂಡಿಕಾಹೋಮ ನಡೆದಿದ್ದು, ರಾತ್ರಿ ಮೇಷ ಲಗ್ನದಲ್ಲಿ ದೇವಿಯ ಉತ್ಸವ ಶಾಸ್ತ್ರೋಕ್ತವಾಗಿ ನಡೆಯಿತು.
ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ ಕೋವಿಡ್ ಮಾರ್ಗಸೂಚಿ ಇರುವ ಕಾರಣ ಹೆಚ್ಚಿನ ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿಲ್ಲ. ದೇವಸ್ಥಾನದ ಸುತ್ತಮುತ್ತಲ ಗ್ರಾಮಸ್ಥರು, ಸಿಬ್ಬಂದಿ, ಅರ್ಚಕರ ಕುಟುಂಬ, ಆಡಳಿತ ಮಂಡಳಿ ಕುಟುಂಬದವರು ಮತ್ತು ಸೇವಾ ಸಿಬ್ಬಂದಿ ಮಾತ್ರ ಭಾಗವಹಿಸಿ ಉತ್ಸವವನ್ನು ಕಣ್ತುಂಬಿಕೊಂಡರು.
ಇದನ್ನೂ ಓದಿ:ಪ್ರತಿ ವರ್ಷದಂತೆ ಈ ವರ್ಷವೂ ಶುಭ ಸುದ್ದಿ : ಅಂಬಾರಿ ಅರಮನೆ ಸೇರುತ್ತಿದ್ದಂತೆ ಧರೆಗಿಳಿದ ವರುಣ