ಉಡುಪಿ: ಬೋಳ ಗ್ರಾಮ ಪಂಚಾಯತ್ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರಿಟ್ಟು ವಿವಾದ ಸೃಷ್ಟಿಸಲಾಗಿತ್ತು. ಈ ಘಟನೆ ಉಡುಪಿಯ ಕಾರ್ಕಳ ಬೋಳ ಎಂಬಲ್ಲಿ ನಡೆದಿದೆ.
ಇದು ಕಿಡಿಗೇಳಿಗಳ ಕೃತ್ಯ ಎಂದು ಗ್ರಾಮ ಪಂಚಾಯತ್ ಪಿಡಿಒ ಹೇಳಿದ್ದು, ಪಂಚಾಯತ್ಗೂ ಈ ಬೋರ್ಡ್ಗೂ ಯಾವುದೇ ಸಂಬಂಧ ಇಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ಮುಖಂಡರು ದೇಶ ಕಂಡ ಮೊದಲ ಭಯೋತ್ಪಾದಕನ ಹೆಸರು ರಸ್ತೆಗೆ ಇಡಲಾಗಿದೆ. ತಕ್ಷಣ ಈ ಬೋರ್ಡನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದರು.