ಕರ್ನಾಟಕ

karnataka

ETV Bharat / state

ಅದಮಾರು ಮಠದಲ್ಲಿ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ - undefined

ಮಧ್ವ ಸರೋವರದ ಬಳಿಯ ಕಟ್ಟಿಗೆ ರಥ ನಿರ್ಮಿಸುವ ಸ್ಥಳದಲ್ಲಿ ಕಟ್ಟಿಗೆಯನ್ನು ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಲಾಯಿತು. ಅದಮಾರು ಮಠದ ಆಸ್ಥಾನ ಪುರೋಹಿತ ಶಿಬರೂರು ವಾಸುದೇವ ಅವರ ನೇತೃತ್ವದಲ್ಲಿ ಕಟ್ಟಿಗೆ ಮೂಹೂರ್ತದ ವಿಧಿವಿಧಾನ ನಡೆಯಿತು.

ಅದಮಾರು ಮಠ

By

Published : Jul 5, 2019, 10:10 PM IST

ಉಡುಪಿ:ಅದಮಾರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಇವತ್ತು ಕಟ್ಟಿಗೆ ಮುಹೂರ್ತವು ಶ್ರೀಕೃಷ್ಣ ಮಠದ ಮಧ್ವಸರೋವರದ ಬಳಿ ನೆರವೇರಿತು. ಮಠಾಧೀಶರು ಮತ್ತು ಭಕ್ತರು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾದರು.

ಅದಮಾರು ಮಠದ ಆಸ್ಥಾನ ಪುರೋಹಿತ ಶಿಬರೂರು ವಾಸುದೇವ ಅವರ ನೇತೃತ್ವದಲ್ಲಿ ಕಟ್ಟಿಗೆ ಮೂಹೂರ್ತದ ವಿಧಿವಿಧಾನ ನಡೆಯಿತು. ಮಠಾಧೀಶರು ಮತ್ತು ಭಕ್ತಾದಿಗಳು ಈ ಧಾರ್ಮಿಕ ವಿಧಿಗೆ ಸಾಕ್ಷಿಯಾದರು.

ಅದಮಾರು ಮಠದಲ್ಲಿ ನಡೆದ ಪೂಜಾ ಕೈಂಕರ್ಯ.

ಉಡುಪಿ ಪರ್ಯಾಯಕ್ಕೆ ಐದೇ ತಿಂಗಳು ಬಾಕಿಯಿದೆ. ಪಲಿಮಾರು ಮಠದ ಪರ್ಯಾಯದ ಬಳಿಕ ಅದಮಾರು ಸ್ವಾಮೀಜಿಗೆ ಪೂಜಾ ಕೈಂಕರ್ಯದ ಅಧಿಕಾರ ಸಿಗಲಿದೆ. ಪರ್ಯಾಯ ಮಹೋತ್ಸವಕ್ಕೂ ಮುನ್ನ ಭಕ್ತರಿಗೆ ನಿತ್ಯ ಅನ್ನಸಂತರ್ಪಣೆಯ ಸಂಕಲ್ಪದಿಂದ ಭಾವಿ ಪರ್ಯಾಯ ಮಠಾಧೀಶರು ಮುಹೂರ್ತ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಿದ್ದಾರೆ. ಉಡುಪಿಯ ಶ್ರೀಕೃಷ್ಣ ದೇವರಿಗೆ ನೈವೇದ್ಯ ಹಾಗೂ ಮಠಕ್ಕೆ ಆಗಮಿಸುವ ಭಕ್ತರಿಗೆ ತಯಾರಿಸುವ ಅಡುಗೆ ಮಾಡಲು ಬೇಕಾದ ಕಟ್ಟಿಗೆಯನ್ನು ರಥದ ಮಾದರಿಯಲ್ಲಿ ಸಂಗ್ರಹಿಸಿಡುವ ಪ್ರಾರಂಭೋತ್ಸವವು ಕಟ್ಟಿಗೆ ಮುಹೂರ್ತ ಎನ್ನುವ ಆಚರಣೆಯಲ್ಲಿದೆ.

ಬೆಳಗ್ಗೆ 8 ಗಂಟೆಗೆ ಸಿಂಹ ಲಗ್ನ ಸುಮೂಹೂರ್ತದಲ್ಲಿ ಅದಮಾರು ಮಠದ ಪಟ್ಟದ ದೇವರಲ್ಲಿ ಪೂಜೆ ಸಲ್ಲಿಸಿ ನಂತರ ಚಂದ್ರಮೌಳೇಶ್ವರ, ಅನಂತೇಶ್ವರ, ಶ್ರೀಕೃಷ್ಣ, ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥನೆ ಕಾರ್ಯಕ್ರಮ ಆರಂಭಗೊಂಡಿತು. ಅದಮಾರು ಮಠದಿಂದ ತಲೆಯ ಮೇಲೆ ಕಟ್ಟಿಗೆಯನ್ನು ಹೊತ್ತುಕೊಂಡು ರಾಜಾಂಗಣ, ಗೀತಾ ಮಂದಿರವಾಗಿ ಮೆರವಣಿಗೆಯಲ್ಲಿ ಸಾಗಿತು.

For All Latest Updates

TAGGED:

ABOUT THE AUTHOR

...view details