ಕರ್ನಾಟಕ

karnataka

ETV Bharat / state

ಬೆಂಗಳೂರು ಸ್ಲಂಗೆ ಕೊರೊನಾ ಹರಡಿದ್ದು ತಬ್ಲಿಘಿಗಳಿಂದ.. ಮತ್ತೆ ಸಂಸದೆ ಕರಂದ್ಲಾಜೆ ಲೂಸ್‌ಟಾಕ್‌..

ಮಹಾರಾಷ್ಟ್ರದಿಂದ ಬರುವವರ ಪಾಸ್ ತಡೆಯಲು ಮನವಿ ಮಾಡಿದ್ದೇನೆ. ಸರ್ಕಾರದ ಮುಖ್ಯಕಾರ್ಯದರ್ಶಿಗಳ ಜತೆ ಈ ಕುರಿತು ಮಾತನಾಡಿದ್ದೇನೆ ಎಂದು ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ
ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

By

Published : Jun 5, 2020, 9:22 PM IST

ಉಡುಪಿ: ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು. ಪಾದರಾಯನಪುರ, ಸಿದ್ಧಿಕ್ ಲೇಔಟ್‌ನಲ್ಲಿ ಉದ್ದೇಶಪೂರ್ವಕವಾಗಿ ಸೋಂಕು ಹರಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಸಂಸದೆ ಶೋಭಾ ಕರಂದ್ಲಾಜೆರಿಂದಮತ್ತೆ ಲೂಸ್‌ಟಾಕ್..‌

ದೇಶದಲ್ಲಿ ಕೊರೊನಾ ಹರಡಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ. ಇಲ್ಲಿನ ಅನ್ನ ತಿಂದವರು ರೋಗ ಹಬ್ಬಿಸಿದರೆ ಅವರಿಗೆ ಕ್ಷಮೆ ಇಲ್ಲ. ಕುಮ್ಮಕ್ಕು ಕೊಡುವ ಜನಪ್ರತಿನಿಧಿ, ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಮಹಾರಾಷ್ಟ್ರದಿಂದ ಬರುವವರ ಪಾಸ್ ತಡೆಯಲು ಮನವಿ ಮಾಡಿದ್ದೇನೆ. ಸರ್ಕಾರದ ಮುಖ್ಯಕಾರ್ಯದರ್ಶಿಗಳ ಜತೆ ಈ ಕುರಿತು ಮಾತನಾಡಿದ್ದೇನೆ ಎಂದು ತಿಳಿಸಿದರು.

ಆನ್‌ಲೈನ್ ಪಾಸ್ ನಿಲ್ಲಿಸಲು ಸಲಹೆ ಕೊಟ್ಟಿದ್ದೇನೆ. ಸೋಂಕಿತರು ಗುಣಮುಖರಾದ ಮೇಲೆ ಉಳಿದವರಿಗೆ ಪಾಸ್ ಕೊಡಲು ಸಲಹೆ ನೀಡಲಾಗಿದೆ. ಒಂದು ವಾರದಲ್ಲಿ ಬಹಳ ಕಡಿಮೆ ಜನ ಬಂದಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕಾಗಿದೆ. ಎಂಎಚ್​ಐ ಗೈಡ್‌ಲೈನ್ ಪ್ರಕಾರ ಬರುವವರನ್ನು ತಡೆಯುವಂತಿಲ್ಲ. ಎಲ್ಲಾ ಒಮ್ಮೆ ಕ್ಲಿಯರ್ ಆದಮೇಲೆ ಉಡುಪಿಗೆ ಬನ್ನಿ ಎಂದು ಮುಂಬೈನಿಂದ ಬರುವವರಲ್ಲಿ ಮನವಿ ಮಾಡಿಕೊಂಡರು.

ABOUT THE AUTHOR

...view details