ಕರ್ನಾಟಕ

karnataka

ETV Bharat / state

ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ: ಕಿಡಿ ಕಾರಿದ ಪೇಜಾವರ ಶ್ರೀ, ಸಂಸದೆ ಶೋಭಾ - ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರತಿಕ್ರಿಯೆ,

ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಿರುವ ಆರೋಪಕ್ಕೆ ಪೇಜಾವರ್​ ಶ್ರೀಗಳು ಮತ್ತು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ಹೊರ ಹಾಕಿದ್ದಾರೆ.

MP Shobha Karandlaje reaction, MP Shobha Karandlaje reaction about Pogaru movie issue, Pejawar sri Vishwesha Tirtha reaction, Pejawar sri Vishwesha Tirtha reaction about Pogaru movie issue, Pogaru movie issue, Pogaru movie issue news, ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ, ಪೊಗರು ಚಿತ್ರದ ವಿವಾದದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ,  ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರತಿಕ್ರಿಯೆ, ಪೊಗರು ಚಿತ್ರದ ವಿವಾದದ ಬಗ್ಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರತಿಕ್ರಿಯೆ,
ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ: ಕಿಡಿ ಕಾರಿದ ಪೇಜಾವರ ಶ್ರೀ, ಸಂಸದೆ ಶೋಭಾ

By

Published : Feb 24, 2021, 2:31 AM IST

ಉಡುಪಿ:ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪಕ್ಕೆ ಪೇಜಾವರ್ ಶ್ರೀಗಳು ಮತ್ತು ಸಂಸದೆ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ: ಕಿಡಿ ಕಾರಿದ ಪೇಜಾವರ ಶ್ರೀ, ಸಂಸದೆ ಶೋಭಾ

ಪೊಗರು ಚಿತ್ರ ತಂಡಕ್ಕೆ ಪೇಜಾವರ ಶ್ರೀ ಎಚ್ಚರಿಕೆ ನೀಡಿದ್ದಾರೆ. ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯಗಳಿರುವುದು ಗಮನಕ್ಕೆ ಬಂದಿದೆ. ಆಕ್ಷೇಪ ಇರುವ ದೃಶ್ಯಗಳಿಗೆ ಕತ್ತರಿ ಹಾಕುವ ಮಾಹಿತಿಯೂ ಸಹ ಸಿಕ್ಕಿದೆ ಎಂದರು.

ಸಮಾಜದಲ್ಲಿ ನೆಮ್ಮದಿಯಿಂದ ಬಾಳಬೇಕಾದರೆ ಇಂತಹ ಕೃತ್ಯಗಳಿಗೆ ಕೈಹಾಕಬಾರದು. ಒಂದು ಸಮಾಜವನ್ನು ಕೆಣಕಿ ಹಳಿದು ಯಾರೂ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಅವಹೇಳನ ಮಾಡುವ ಕೃತ್ಯ ಇಲ್ಲಿಗೆ ಕೊನೆಯಾಗಲಿ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕೆಲಸ ಯಾರೂ ಮಾಡಬೇಡಿ ಅಂತಾ
ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದೆ ಆಕ್ರೋಶ...

ಪೊಗರು ಚಿತ್ರ ಹಿಂದೂ ಸಮಾಜದ ಭಾವನೆಗೆ ಧಕ್ಕೆ ಮಾಡಿದೆ. ಪೂಜಾ ಪದ್ಧತಿ, ಅರ್ಚಕರಿಗೆ ಅವಮಾನ ಮಾಡಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿತ್ರದಿಂದ ಶ್ರದ್ಧೆ, ಆಚಾರ ವಿಚಾರಕ್ಕೆ ಧಕ್ಕೆಯಾಗಿದೆ. ಮನೆಯಲ್ಲಿ ಪೂಜೆ ಆಗಬೇಕೆಂದರೆ ಬ್ರಾಹ್ಮಣರನ್ನು ಕರೆಯುತ್ತಾರೆ. ಆಕ್ಷೇಪಾರ್ಹ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ ಹಾಕಿಲ್ಲ ಯಾಕೆ?. ಸೆನ್ಸಾರ್ ಮಂಡಳಿ ನಡೆ ಸಂಶಯಕ್ಕೆ ಎಡೆಮಾಡಿದೆ ಎಂದು ಹೇಳಿದರು.

ಚಿತ್ರ ತಂಡ ಪ್ರಚಾರ ಗಿಟ್ಟಿಸಿ ಹಣ ಮಾಡಬಹುದು ಎಂದು ಅಂದುಕೊಂಡಿರಬಹುದು. ಇಂತಹ ಮಾನಸಿಕತೆಯನ್ನು ನಾವು ತೊಡೆದು ಹಾಕಬೇಕು ಎಂದು ಕಿಡಿ ಕಾರಿದರು.

ಪೊಗರು ಚಲನಚಿತ್ರ ಪ್ರದರ್ಶನಕ್ಕೆ ನನ್ನ ವಿರೋಧ ಇದೆ. ಚಿತ್ರವನ್ನು ವಾಪಸ್ ಪಡೆದರೆ ಸೆನ್ಸಾರ್ ಮಾಡಿ. ಪ್ರದರ್ಶನ ನಿಲ್ಲಿಸಲು ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತಿದ್ದೇನೆ. ಚಿತ್ರದ ಕೆಲ ದೃಶ್ಯಗಳನ್ನು ಕಂಡು ನನಗೆ ಬಹಳ ನೋವಾಗಿದೆ. ನಿಮ್ಮ ದಾರ್ಷ್ಟ್ಯವನ್ನು ಬೇರೆ ಧರ್ಮಗಳಿಗೆ ತೋರಿಸಲು ಶಕ್ತಿ ಇದೆಯೇ ಎಂದು ಸವಾಲು ಹಾಕಿದರು.

ಇದು ಕೇವಲ ಬ್ರಾಹ್ಮಣರು ವಿರೋಧಿಸುವ ವಿಚಾರ ಅಲ್ಲ. ಪೂರ್ಣ ಹಿಂದೂ ಸಮಾಜ ಎದ್ದುನಿಂತು ವಿರೋಧಿಸಬೇಕು ಎಂದು ಕರೆ ನೀಡಿದರು.

ABOUT THE AUTHOR

...view details