ಉಡುಪಿ:ಕೊರೊನಾ ನಿರ್ಬಂಧದ ನಡುವೆಯೂ ಉಡುಪಿ ಜಿಲ್ಲೆಯಲ್ಲಿ ಮಾದರಿ ಮದುವೆಯೊಂದು ನೆರವೇರಿದೆ. ಉಡುಪಿ ನಗರದ ಅಂಬಾಗಿಲು ಪುತ್ತೂರಿನ ಎಲ್ವಿಟಿ ದೇವಸ್ಥಾನದಲ್ಲಿ ಸರಳ ಮದುವೆ ನೆರವೇರಿದ್ದು, ಕೇವಲ ಐವತ್ತು ಜನ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸರ್ಕಾರ ಸೂಚಿಸಿತ್ತು. ಅದರಂತೆ ನಲವತ್ತರಿಂದ ಐವತ್ತು ಜನ ಆಪ್ತ ಸಂಬಂಧಿಕರು ಪಾಲ್ಗೊಂಡಿದ್ದರು.
ಕೊರೊನಾ ನಿರ್ಬಂಧದ ನಡುವೆ ಉಡುಪಿಯಲ್ಲಿ ಮಾದರಿ ಮದುವೆ..! - ಉಡುಪಿಯಲ್ಲಿ ಮಾದರಿ ಮದುವೆ
ಮದುವೆ ಸಭಾಂಗಣಕ್ಕೆ ಬರುವ ಮೊದಲು ಬಾಗಿಲಿನಲ್ಲೇ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಸರ್ ಮಾಡಲಾಯ್ತು. ಮಾಸ್ಕ್ ಇಲ್ಲದೆ ಯಾರಿಗೂ ಪ್ರವೇಶ ಇರಲಿಲ್ಲ. ಮದುವೆಗೆ ಬಂದ ಪ್ರತಿಯೊಬ್ಬರ ಫೋನ್ ನಂಬರ್ ಮತ್ತು ವಿಳಾಸವನ್ನು ಮದುವೆ ಮನೆಯವರು ತೆಗೆದುಕೊಂಡಿದ್ದಾರೆ.
ಮದುವೆ ಸಭಾಂಗಣಕ್ಕೆ ಬರುವ ಮೊದಲು ಬಾಗಿಲಿನಲ್ಲೇ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಸರ್ ಮಾಡಲಾಯ್ತು. ಮಾಸ್ಕ್ ಇಲ್ಲದೆ ಯಾರಿಗೂ ಪ್ರವೇಶ ಇರಲಿಲ್ಲ. ಮದುವೆಗೆ ಬಂದ ಪ್ರತಿಯೊಬ್ಬರ ಫೋನ್ ನಂಬರ್ ಮತ್ತು ವಿಳಾಸವನ್ನು ಮದುವೆ ಮನೆಯವರು ತೆಗೆದುಕೊಂಡಿದ್ದಾರೆ. ಸಭಾಂಗಣದಲ್ಲಿ ಕುರ್ಚಿಗಳನ್ನು ಸಾಮಾಜಿಕ ಅಂತರ ಇಟ್ಟುಕೊಂಡೇ ಜೋಡಿಸಲಾಗಿತ್ತು. ಗುಂಪು ಸೇರುವುದಾಗಲಿ, ಮಹಿಳೆಯರು ಹರಟೆ ಹೊಡೆಯುವುದಾಗಲಿ ಯಾವುದನ್ನು ಮಾಡಬಾರದು ಎಂದು ತಹಶೀಲ್ದಾರರು ಮೊದಲೇ ಸೂಚನೆ ಕೊಟ್ಟಿದ್ದರು.
ನೂತನ ವಧು ವರರಿಗೆ ಕೂಡ ಮದುವೆಗೆ ಬಂದ ಎಲ್ಲರೂ ಶುಭ ಕೋರುವ ಅವಕಾಶ ಇರಲಿಲ್ಲ. ಮದುವೆ ಊಟದ ಸಂದರ್ಭ ಕೂಡ ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ವಹಿಸಲಾಗಿತ್ತು.