ಉಡುಪಿ :ಜಿಲ್ಲೆಯಲ್ಲಿ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಜಿಲ್ಲೆಗೆ ಲಾಕ್ಡೌನ್ ಅಗತ್ಯವಿಲ್ಲ: ಶಾಸಕ ರಘುಪತಿ ಭಟ್! - ಉಡುಪಿ ಜಿಲ್ಲಾ ಲಾಕ್ಡೌನ್ ಕುರಿತು ರಘುಪತಿ ಭಟ್ ಹೇಳಿಕೆ
ಸಧ್ಯ ಉಡುಪಿ ಜಿಲ್ಲೆಯನ್ನು ಲಾಕ್ಡೌನ್ ಮಾಡುವ ಅಗತ್ಯವಿಲ್ಲ. ಹೊರ ಜಿಲ್ಲೆಗಳಿಂದ ಬರುತ್ತಿರುವ ಸೋಂಕಿತರೇ ಬಹಳ ದೊಡ್ಡ ಸವಾಲಾಗಿದ್ದು, ಜಿಲ್ಲೆಯ ಗಡಿ ಭಾಗವನ್ನು ಸೀಲ್ಡೌನ್ ಮಾಡಲು ಸಲಹೆ ನೀಡಿದ್ದೇನೆಂದು ಶಾಸಕ ರಘುಪತಿ ಭಟ್ ಹೇಳಿದರು.
ಶಾಸಕ ರಘುಪತಿ ಭಟ್
ಜನ ಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ. ಜಿಲ್ಲೆಯ ಒಳಗಡೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಕಷ್ಟವಲ್ಲ. ಹೊರ ಜಿಲ್ಲೆಯಿಂದ ಬರುತ್ತಿರುವ ಸೋಂಕಿತರೇ ಬಹಳ ದೊಡ್ಡ ಸವಾಲಾಗಿದ್ದಾರೆ.
ಜಿಲ್ಲೆಯ ಗಡಿ ಭಾಗಗಳನ್ನು ಸೀಲ್ಡೌನ್ ಮಾಡಲು ಸಲಹೆ ನೀಡಿದ್ದೇನೆ. ಹೊರ ಜಿಲ್ಲೆಯಿಂದ ಬರುತ್ತಿರುವವರನ್ನು ಹೋಮ್ ಕ್ವಾರಂಟೈನ್ ಮಾಡಬೇಕು. ಆಗ ಸೋಂಕು ಹರಡುವುದು ನಿಯಂತ್ರಣಕ್ಕೆ ಬರುತ್ತದೆ. ನಾನು ಕೂಡ ಸಲಹೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಿನೆಂದು ಶಾಸಕರು ಹೇಳಿದರು.