ಕರ್ನಾಟಕ

karnataka

ETV Bharat / state

ಜೂ.7 ರ ಬಳಿಕ ಉಡುಪಿಯಲ್ಲಿ ಸಂಪೂರ್ಣ ಲಾಕ್​​ಡೌನ್ ಅಗತ್ಯವಿಲ್ಲ: ಶಾಸಕ‌ ರಘುಪತಿ ಭಟ್

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ಜೂ.7 ರ ನಂತರ ಸಂಪೂರ್ಣ ಲಾಕ್​​ಡೌನ್ ಆಗತ್ಯವಿಲ್ಲ ಎಂದು ಶಾಸಕ‌ ರಘುಪತಿ ಭಟ್ ಹೇಳಿದ್ದಾರೆ.

MLA Raghupati Bhat
ಶಾಸಕ‌ ರಘುಪತಿ ಭಟ್

By

Published : May 31, 2021, 10:06 AM IST

ಉಡುಪಿ:ಜೂನ್ 7 ರ ಬಳಿಕ ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​​ಡೌನ್ ಅಗತ್ಯವಿಲ್ಲ ಎಂದು ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಶಾಸಕ‌ ರಘುಪತಿ ಭಟ್ ಪ್ರತಿಕ್ರಿಯೆ

ಈ ಬಗ್ಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ಸದ್ಯ 18-19 ಇದೆ. ಜೂ.7ರ ಒಳಗೆ ಪಾಸಿಟಿವಿಟಿ ರೇಟ್ 10ಕ್ಕೆ ಇಳಿಕೆಯಾಗಬೇಕು. ಸಾರ್ವಜನಿಕ ಸಭೆ- ಸಮಾರಂಭಗಳಿಗೆ ನಿರ್ಬಂಧ ಹಾಕಬೇಕು. ಈಗಾಗಲೇ ಜಿಲ್ಲೆಯ ಜನರ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಕೊರೊನಾ ಬಗ್ಗೆ ಜನತೆಯಲ್ಲಿ ಈಗ ಜಾಗೃತಿ ಮೂಡಿದ್ದು, ಮುಂದಿನ ಮೂರು ತಿಂಗಳು ಎಲ್ಲಾ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಬೇಕು ಎಂದರು.

ಲಾಕ್​​ಡೌನ್​ ಮುಂದುವರೆಸಿದರೆ ಯಾವುದೇ ಉಪಯೋಗವಿಲ್ಲ‌. ಪಾಸಿಟಿವಿಟಿ ರೇಟ್ ಹೆಚ್ಚು ಇದ್ದ ಜಿಲ್ಲೆಗಳಲ್ಲಿ ಲಾಕ್​ಡೌನ್​ ಮುಂದುವರೆಸಬಹುದು. ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವುದು ಕೇವಲ ನಮ್ಮ ಪ್ರಯತ್ನದಿಂದ ಅಲ್ಲ. ಈ ಸಾಂಕ್ರಾಮಿಕ ರೋಗ ಒಂದು ಬಾರಿ ಎಲ್ಲಾ ಕಡೆ ವ್ಯಾಪಿಸಿದೆ. ಇಮ್ಯೂನಿಟಿಯಿಂದ ಈಗ ತನ್ನಿಂದ ತಾನೇ ನಿಯಂತ್ರಣಕ್ಕೆ ಬಂದಿದೆ.

ಜನ ಲಾಕ್​​ಡೌನ್​ ಮುಗಿಯಿತು ಎಂದು ಮೈ ಮರೆಯಬಾರದು. ಶೇ.70 ವ್ಯಾಕ್ಸಿನೇಷನ್ ಆಗುವವರೆಗೆ ಜನ ಬಹಳ ಜಾಗೃತರಾಗಿರಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ABOUT THE AUTHOR

...view details