ಕರ್ನಾಟಕ

karnataka

ETV Bharat / state

ಸಾವರ್ಕರ್ ಪುತ್ಥಳಿ ಬದಲಿಗೆ ಸರ್ಕಲ್ ನಿರ್ಮಾಣ ಒಳ್ಳೆಯದು: ಶಾಸಕ‌ ರಘುಪತಿ ಭಟ್ - savarkar

ಖಂಡಿತವಾಗಿ ಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣವಾಗುತ್ತದೆ. ವೀರ ಸಾವರ್ಕರ್ ಜೊತೆಗೆ ಅಂಬೇಡ್ಕರ್ ಸರ್ಕಲ್ ಕೂಡ ಮಾಡುತ್ತೇವೆ ಎಂದು ಶಾಸಕ‌ ರಘುಪತಿ ಭಟ್ ಹೇಳಿದ್ದಾರೆ.

ಶಾಸಕ‌ ರಘುಪತಿ ಭಟ್
ಶಾಸಕ‌ ರಘುಪತಿ ಭಟ್

By

Published : Aug 23, 2022, 10:53 PM IST

ಉಡುಪಿ:ಇಲ್ಲಿನ ಬ್ರಹ್ಮಗಿರಿ ಸರ್ಕಲ್​ನಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಈ ಬಗ್ಗೆ ಮುಂದಿನ ಕೌನ್ಸಿಲ್ ಮೀಟಿಂಗ್​​ನಲ್ಲಿ ಚರ್ಚಿಸಿ, ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಪುತ್ಥಳಿ ನಿರ್ಮಿಸುವುದು ಅಷ್ಟು ಸಮಂಜಸವಲ್ಲ. ಮುಂದಿನ ದಿನಗಳಲ್ಲಿ ಸಾವರ್ಕರ್ ಪ್ರತಿಮೆಗೆ ಅವಮಾನವಾದರೆ ಕಷ್ಟ. ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸಲು ನಗರಸಭೆಗೆ ಪತ್ರ ಬರೆದಿದ್ದೇನೆ ಎಂದು ಶಾಸಕ ರಘುಪತಿ ಭಟ್​ ತಿಳಿಸಿದ್ದಾರೆ.

ಶಾಸಕ‌ ರಘುಪತಿ ಭಟ್

ಹಿಂದೂ ಮುಖಂಡ ಯಶಪಾಲ ಸುವರ್ಣ ಪುತ್ಥಳಿ ಸ್ಥಾಪಿಸುವುದಾಗಿ ಹೇಳಿದ್ದರು. ಈ ಬಗ್ಗೆ ಉಡುಪಿ ನಗರಸಭೆಗೆ ಮನವಿ ಸಹ ಮಾಡಿದ್ದರು. ಬ್ಯಾನರ್ ಅಳವಡಿಸಿದ್ದ ಸ್ಥಳದಲ್ಲಿ ಪುತ್ಥಳಿ ನಿರ್ಮಿಸುವುದಾಗಿ ಘೋಷಿಸಿದ್ದರು. ಹಿಂದೂ ಮಹಾಸಭಾ, ಹಿಂದೂ ಜಾಗರಣ ವೇದಿಕೆ ಕೂಡ ನಗರಸಭೆಗೆ ಮನವಿ ಮಾಡಿತ್ತು. ಇದೀಗ ಉಡುಪಿ ನಗರಸಭೆ ಮೇಲೆ ಈ ವಿಚಾರದ ಬಗ್ಗೆ ಒತ್ತಡ ಹೆಚ್ಚಾಗುತ್ತಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಗೋಡ್ಸೆ, ಸಾವರ್ಕರ್ ಬ್ಯಾನರ್ ತೆರವು

ABOUT THE AUTHOR

...view details