ಕರ್ನಾಟಕ

karnataka

ETV Bharat / state

ಉಡುಪಿ: ಸಚಿವರ ಎಸ್ಕಾರ್ಟ್ ವಾಹನ ಪಲ್ಟಿ, ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ ಕೋಟ ಶ್ರೀನಿವಾಸ ಪೂಜಾರಿ - ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್ ವಾಹನ ಪಲ್ಟಿ

ಅಪಘಾತದಲ್ಲಿ ಗಾಯಗೊಂಡ ಎಸ್ಕಾರ್ಟ್ ಸಿಬ್ಬಂದಿಯನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಆಸ್ಪತ್ರೆಗೆ ದಾಖಲಿಸಿದರು.

ಸಚಿವರ ಎಸ್ಕಾರ್ಟ್ ವಾಹನ ಪಲ್ಟಿ
ಸಚಿವರ ಎಸ್ಕಾರ್ಟ್ ವಾಹನ ಪಲ್ಟಿ

By

Published : Jul 12, 2022, 7:57 PM IST

ಉಡುಪಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಎಸ್ಕಾರ್ಟ್ ವಾಹನ ಉಡುಪಿಯ ಸಂತೆಕಟ್ಟೆ ಕೆಜಿ ರೋಡ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಪಘಾತಕ್ಕೀಡಾಗಿದೆ. ಇಂದು ಸಂಜೆ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಜೀಪ್ ಡಿವೈಡರ್ ಮೇಲೆ ಪಲ್ಟಿಯಾಗಿದೆ. ಜೀಪಿನಲ್ಲಿದ್ದ ಬೆಂಗಾವಲು ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಗಾಯಾಳು ಸಿಬ್ಬಂದಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿಯ ಖಾಸಗಿ ಆಸ್ಪತ್ರೆಗೆ ತಕ್ಷಣ ದಾಖಲು ಮಾಡಿದ್ದಾರೆ. ಬೆಂಗಾವಲು ವಾಹನದ ಮುಂದೆ ಸಂಚರಿಸುತಿದ್ದ ಲಾರಿ ಸೂಚನೇ ನೀಡದೇ ಪಥ ಬದಲಿಸಿದ್ದರಿಂದ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಬೆಂಗಾವಲು‌ ಸಿಬ್ಬಂದಿ ಗಣೇಶ್ ಆಳ್ವರಿಗೆ ಸಣ್ಣ ಪುಟ್ಟ ಗಾಯಗಳೊಂದಿಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿವರ ಎಸ್ಕಾರ್ಟ್ ವಾಹನ ಪಲ್ಟಿ

(ಇದನ್ನೂ ಓದಿ: ಮಗು ನುಂಗಿದೆ ಎಂದು ಮೊಸಳೆ ಕಟ್ಟಿಹಾಕಿದ್ದ ಗ್ರಾಮಸ್ಥರು: ಮಾರನೇ ದಿನ ನದಿಯಲ್ಲಿ ತೇಲಿಬಂತು ಶವ !)

ABOUT THE AUTHOR

...view details