ಉಡುಪಿ :ರಾಯಚೂರಿನಲ್ಲಿ ಕೊರೊನಾ ಸೋಂಕಿತ ಮಹಿಳೆಗೆ ಗರ್ಭಪಾತವಾದ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಜಿಲ್ಲಾಡಳಿತ ಮತ್ತು ಡಿಹೆಚ್ಒ ಜೊತೆ ಮಾತನಾಡಿದ್ದೇನೆ. ತಡವಾಗಿ ಚಿಕಿತ್ಸೆ ನೀಡಿದ ವೈದ್ಯರನ್ನು ತಕ್ಷಣ ಅಮಾನತು ಮಾಡಲು ಆದೇಶ ನೀಡಿದ್ದೇನೆ ಎಂದರು.
ರಾಯಚೂರು ವೈದ್ಯರ ಅಮಾನತಿಗೆ ಸಚಿವ ಶ್ರೀರಾಮುಲು ಆದೇಶ - Raichur doctors
ಮೂರು ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ರಕ್ತಸ್ರಾವವಾಗಿದೆ. ಆದರೆ, ಈ ವೇಳೆ ವೈದ್ಯರು ತಕ್ಷಣ ಚಿಕಿತ್ಸೆ ನೀಡದ ಕಾರಣ ಗರ್ಭಪಾತವಾಗಿತ್ತು.
ಸಚಿವ ಶ್ರೀ ರಾಮುಲು
ರಕ್ತಸ್ರಾವದಿಂದ ಬಳಲುತ್ತಿದ್ದ ಕೊರೊನಾ ಸೋಂಕಿತ ಗರ್ಭಿಣಿಗೆ ಗರ್ಭಪಾತ
ಕೋವಿಡ್-19 ಬಂದಿರಲಿ, ಬಾರದಿರಲಿ ಅದು ಪ್ರಶ್ನೆಯೇ ಅಲ್ಲ. ತಡವಾಗಿ ಚಿಕಿತ್ಸೆ ನೀಡಿರುವುದು ದೊಡ್ಡ ತಪ್ಪು. ಈ ತರದ ಘಟನೆ ಮತ್ತೆ ಮರುಕಳಿಸಬಾರದೆಂದು ಸಸ್ಪೆಂಡ್ ಮಾಡಲಾಗಿದೆ ಎಂದು ಉಡುಪಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ರು.
Last Updated : Jun 9, 2020, 7:53 PM IST