ಕರ್ನಾಟಕ

karnataka

ETV Bharat / state

ಡಿಕೆಶಿ ಬಂಧನ ಕುರಿತು ಕಾಂಗ್ರೆಸ್ ನಡವಳಿಕೆ ಖಂಡನಾರ್ಹ: ಕೋಟ ಶ್ರೀನಿವಾಸ ಪೂಜಾರಿ - ಡಿಕೆಶಿ ಬಂಧನ ಹಿನ್ನೆಲೆ ಪ್ರತಿಭಟನೆ

ನಿನ್ನೆವರೆಗೂ ನಾವು ಸಾಫ್ಟ್ ಕಾರ್ನರ್ ಹೊಂದಿದ್ದೆವು. ಕಾನೂನು ಉಂಟು‌, ಡಿಕೆಶಿ ಉಂಟು ಅಂತ ಸುಮ್ಮನಿದ್ದೆವು. ಹಾಗಂತ ಪ್ರತಿಭಟನೆ ಹೆಸರಲ್ಲಿ ದಬ್ಬಾಳಿಕೆ ಮಾಡಿದ್ರೆ ಸಹಿಸೋದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ

By

Published : Sep 5, 2019, 2:26 PM IST

ಉಡುಪಿ: ಡಿಕೆಶಿ ಬಂಧನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಡೆದುಕೊಂಡ ನಡವಳಿಕೆ ಖಂಡನಾರ್ಹ ಎಂದು ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಬಂಧನ ಹಿನ್ನೆಲೆ ಪ್ರತಿಭಟನೆ, ಧರಣಿ ಮಾಡಲು ಕಾಂಗ್ರೆಸ್​ಗೆ ಸ್ವಾತಂತ್ರ್ಯ ಇದೆ. ಅದನ್ನು ನಾವು ಪ್ರಶ್ನಿಸುವುದಿಲ್ಲ ಆದರೆ ಪ್ರಧಾನಿ, ಗೃಹಮಂತ್ರಿ ಫೊಟೋ ಸುಟ್ಟು ವಿಕೃತಿ ಮೆರೆಯಲಾಗಿದೆ. ಇದು ಅಸಹ್ಯ ವರ್ತನೆ ಮತ್ತು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಪ್ರತಿಭಟನೆ ಹೆಸರಲ್ಲಿ ದಬ್ಬಾಳಿಕೆ ಮಾಡಿದ್ರೆ ಸಹಿಸೋದಿಲ್ಲ

ED ಅವರಿಂದ ಅನ್ಯಾಯವಾಗಿದ್ರೆ ಸುಪ್ರೀಂಕೋರ್ಟ್​ಗೆ ಹೋಗಲಿ. ಡಿಕೆಶಿ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿಲ್ಲ, ತುರ್ತುಪರಿಸ್ಥಿತಿ ಎದುರಿಸಿ‌ ಜೈಲಿಗೆ ಹೋಗಿಲ್ಲ, ಪ್ರಧಾನಿ, ಗೃಹ ಸಚಿವರಿಗೆ ಅವಮಾನ ಮಾಡಿದರೆ ಪ್ರತಿರೋಧ ಮಾಡೋದು ನಮಗೂ ಗೊತ್ತು ಎಂದರು.

ABOUT THE AUTHOR

...view details