ಉಡುಪಿ:ಉಗ್ರರ ಪತ್ತೆಗೆ ಕರ್ನಾಟಕ ಕರಾವಳಿಯಲ್ಲಿ ಅಲರ್ಟ್ ನೊಟೀಸ್ ಅಂಟಿಸಲಾಗಿದೆ. ಉಡುಪಿಯ ಮಲ್ಪೆ ಬಂದರಿನಲ್ಲಿ ಕರಾವಳಿ ಕಾವಲು ಪೊಲೀಸರು ನೊಟೀಸ್ ಅಂಟಿಸಿದ್ದಾರೆ.
ಕರಾವಳಿಯಲ್ಲಿ ಉಗ್ರರ ಜಾಡು: ಮಲ್ಪೆ ಬಂದರಿನಲ್ಲಿ ಅಲರ್ಟ್ ನೊಟೀಸ್ - coastal gourd police
ಕರಾವಳಿಯಲ್ಲಿ ಉಗ್ರರ ಪ್ರವೇಶ ಶಂಕೆಯಿಂದಾಗಿ ಉಡುಪಿಯ ಮಲ್ಪೆ ಬಂದರಿನಲ್ಲಿ ಕರಾವಳಿ ಕಾವಲು ಪೊಲೀಸರು ನೊಟೀಸ್ ಅಂಟಿಸಿದ್ದಾರೆ. ಶಂಕಿತ ಉಗ್ರನನ್ನು ಹೋಲುವ ವ್ಯಕ್ತಿ ಕಂಡಲ್ಲಿ ತಿಳಿಸುವಂತೆ ಸೂಚಿಸಿದ್ದಾರೆ.
ಕರಾವಳಿಯಲ್ಲಿ ಉಗ್ರರ ಜಾಡು
ಆರು ಮಂದಿ ಉಗ್ರರು ತಮಿಳುನಾಡು ಪ್ರವೇಶಿಸಿರುವ ಬಗ್ಗೆ ಮಾಹಿತಿಯಿದ್ದು, ಲಷ್ಕರ್ ಈ ತೋಯ್ಬಾ ಉಗ್ರಗಾಮಿ ಸಂಘಟನೆ ಸದಸ್ಯರು ಎಂದು ಹೇಳಲಾಗ್ತಿದೆ. ಇವರಲ್ಲಿ ಓರ್ವ ಪಾಕ್ ಪ್ರಜೆ ಇರುವುದಾಗಿ ಮಾಹಿತಿ ತಿಳಿದುಬಂದಿದೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಬಗ್ಗೆ ಎಚ್ಚರ ವಹಿಸಲಾಗಿದ್ದು, ಶಂಕಿತನನ್ನು ಹೋಲುವ ವ್ಯಕ್ತಿ ಕಂಡಲ್ಲಿ ಕರಾವಳಿ ಕಾವಲುಪಡೆ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿದೆ.