ಕರ್ನಾಟಕ

karnataka

ETV Bharat / state

ಉಡುಪಿ: ಅಮಲು ಪದಾರ್ಥ ಸೇವಿಸಿ ರಸ್ತೆ ಮಧ್ಯೆ​ ರಂಪಾಟ..ಪೊಲೀಸರಿಗೆ ಆವಾಜ್ ಹಾಕಿದ ಕಾಲೇಜು​ ವಿದ್ಯಾರ್ಥಿಗಳು - ಉಡುಪಿ ರಸ್ತೆಯಲ್ಲಿ ವಿದ್ಯಾರ್ಥಿಗಳ ರಂಪಾಟ

ಅಮಲು ಪದಾರ್ಥ ಸೇವಿಸಿ ಮೂವರು ವಿದ್ಯಾರ್ಥಿಗಳು ರಸ್ತೆಯಲ್ಲಿ ರಂಪಾಟ ನಡೆಸಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ನಮ್ಮನ್ನು ಮುಟ್ಟಿದ್ರೆ ಪರಿಣಾಮ ಚೆನ್ನಾಗಿರೋಲ್ಲ ಅಂತ ಆವಾಜ್ ಹಾಕಿದ ಘಟನೆ ಉಡುಪಿಯ ಪಡುಬಿದ್ರಿಯಲ್ಲಿ ನಡೆದಿದೆ.

ಅಮಲು ಪದಾರ್ಥ ಸೇವಿಸಿ ರಸ್ತೆ ಮಧ್ಯೆ​ ರಂಪಾಟ
MBBS students fight in padubidri road at udupi

By

Published : Jan 12, 2022, 9:04 AM IST

Updated : Jan 12, 2022, 2:22 PM IST

ಉಡುಪಿ: ಅಮಲು ಪದಾರ್ಥ ಸೇವಿಸಿ ಮೂವರು ವಿದ್ಯಾರ್ಥಿಗಳು ರಸ್ತೆಯಲ್ಲಿ ರಂಪಾಟ ಮಾಡಿದ ಘಟನೆ ಜಿಲ್ಲೆಯ ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ನಡೆದಿದೆ. ಚೆನ್ನೈ ಮೂಲದ ವಿದ್ಯಾರ್ಥಿಗಳಾದ ಇವರು ನಗರದ ಖಾಸಗಿ ಕಾಲೇಜ್‍ವೊಂದರಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ.

ಸ್ಕೂಟರ್​ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕ ಹಾಗೂ ಓರ್ವ ಯುವತಿ ವಾಹನದಲ್ಲಿ ಪೆಟ್ರೋಲ್ ಖಾಲಿಯಾಗಿ ಸ್ಕೂಟರ್ ನಿಂತಾಗ ಗಲಾಟೆ ಶುರು ಮಾಡಿದ್ದಾರೆ. ವಿದ್ಯಾರ್ಥಿಗಳ ಬೀದಿ ರಂಪಾಟ ಹೆಚ್ಚಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಮಲು ಪದಾರ್ಥ ಸೇವಿಸಿ ರಸ್ತೆ ಮಧ್ಯೆ​ ರಂಪಾಟ ಮಾಡಿದ ವಿದ್ಯಾರ್ಥಿಗಳು

ಗಲಾಟೆ ಬಿಡಿಸಲು ಬಂದ ಪೊಲೀಸರಿಗೆ ವಿದ್ಯಾರ್ಥಿಗಳು ಆವಾಜ್ ಹಾಕಿದ್ದು, ನಮ್ಮನ್ನು ಮುಟ್ಟಿದರೆ ಪರಿಣಾಮ ಚೆನ್ನಾಗಿರಲ್ಲ ಅಂತ ಕೂಗಾಡಿದ್ದಾರೆ. ನಂತರ ಸಾರ್ವಜನಿಕರ ಸಹಾಯದಿಂದ ವಿದ್ಯಾರ್ಥಿಗಳನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಓದಿ:ಒಡಿಯಾ ಚಿತ್ರರಂಗದ ಹಿರಿಯ ನಟ ಮಿಹಿರ್ ದಾಸ್ ನಿಧನ: ಸಂತಾಪ ಸೂಚಿಸಿದ ಪ್ರಧಾನಿ

Last Updated : Jan 12, 2022, 2:22 PM IST

ABOUT THE AUTHOR

...view details