ಉಡುಪಿ:ಕಾರ್ಪೊರೇಷನ್ ಬ್ಯಾಂಕ್ ನ ತವರಾದ ಜಿಲ್ಲೆಯಲ್ಲಿ ಬ್ಯಾಂಕ್ ನೌಕರರು ಭಾರೀ ಪ್ರತಿಭಟನೆಗೆ ಇಳಿದಿದ್ದು.ಕೇಂದ್ರ ಸರ್ಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆ ಇದು ಕಾರ್ಮಿಕ ವಿರೋಧಿ ನೀತಿ ಎಂದು ಆರೋಪಿಸಿ ಕಾರ್ಪೊರೇಷನ್ ಬ್ಯಾಂಕ್ ಎದುರು ನೌಕರರು ಪ್ರತಿಭಟನೆ ನಡೆಸಿದರು.
ವಿಲೀನ ಪ್ರಕ್ರಿಯೆ ವಿರೋಧಿಸಿ ಉಡುಪಿಯಲ್ಲಿ ಬ್ಯಾಂಕ್ ನೌಕರರಿಂದ ಪ್ರತಿಭಟನೆ
ಕಾರ್ಪೋರೇಷನ್ ಬ್ಯಾಂಕ್ನ ತವರಾದ ಉಡುಪಿಯಲ್ಲಿ ಬ್ಯಾಂಕ್ ನೌಕರರು ಭಾರೀ ಪ್ರತಿಭಟನೆಗೆ ಇಳಿದಿದ್ದು, ಕೇಂದ್ರ ಸರ್ಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆ ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿ ಕಾರ್ಪೋರೇಷನ್ ಬ್ಯಾಂಕ್ ಎದುರು ನೌಕರರು ಪ್ರತಿಭಟನೆ ನಡೆಸಿದರು.
ಮುಖ್ಯವಾಗಿ ಹತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ವಿಲೀನಗೊಳಿಸಿ 4 ಬ್ಯಾಂಕ್ಗಳನ್ನಾಗಿ ಮಾಡುವುದು ಉಳಿದ ಆರು ಬ್ಯಾಂಕ್ಗಳ ಕತ್ತು ಹಿಸುಕಿದಂತೆ. ಕಾರ್ಪೋರೇಷನ್ ಬ್ಯಾಂಕ್ ಕರಾವಳಿಯಲ್ಲೇ ಹುಟ್ಟಿದ ಹೆಮ್ಮೆಯ ಬ್ಯಾಂಕ್ ಆಗಿದ್ದು, ವಿಲೀನದಿಂದ ಈ ಬ್ಯಾಂಕ್ ಅಸ್ತಿತ್ವ ಕಳೆದುಕೊಳ್ಳಲಿದೆ. ಕೇಂದ್ರ ಸರ್ಕಾರದ ಬ್ಯಾಂಕ್ ವಿಲೀನ ನಿರ್ಧಾರ ಏಕಪಕ್ಷೀಯ ನಿರ್ಧಾರವಾಗಿದೆ ಎಂದು ಆರೋಪಿಸಿದರು.
ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದ ನೌಕರರು, ದೇಶಕ್ಕೆ ಬ್ಯಾಂಕ್ಗಳ ಅವಶ್ಯಕತೆ ಇದೆಯೇ ಹೊರತು ದೊಡ್ಡ ಬ್ಯಾಂಕ್ ಮಾಡುವುದರಿಂದ ಯಾವುದೇ ಪರಿಹಾರ ಸಿಗಲ್ಲ. ಕೇಂದ್ರ ಸರ್ಕಾರ ತನ್ನ ಏಕಪಕ್ಷೀಯ, ಕಾರ್ಮಿಕ ವಿರೋಧಿ ನೀತಿಯನ್ನು ಮರುಪರಿಶೀಲಿಸಬೇಕು. ಇಲ್ಲದಿದ್ದರೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆಗೆ ಇಳಿಯಲಿದೆ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.