ಉಡುಪಿ: ಹಲವು ದಿನಗಳಿಂದ ಮಾಯವಾದ ವರುಣನಿಗಾಗಿ ಉಡುಪಿಯ ನಾಗರಿಕರು ದೇವರ ಮೊರೆ ಹೋಗಿದ್ದಾರೆ.
ವರುಣನಿಗಾಗಿ ಉಡುಪಿ ಕೃಷ್ಣಮಠದಲ್ಲಿ ಸಾಮೂಹಿಕ ಪ್ರಾರ್ಥನೆ - undefined
ನೀರಿಗಾಗಿ ಎಲ್ಲೆಲ್ಲೂ ಹಾಹಾಕಾರವೆದ್ದಿದೆ. ಹೀಗಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಂದು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ಪ್ರಾರ್ಥನೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಪಾಲ್ಗೊಂಡರು.
![ವರುಣನಿಗಾಗಿ ಉಡುಪಿ ಕೃಷ್ಣಮಠದಲ್ಲಿ ಸಾಮೂಹಿಕ ಪ್ರಾರ್ಥನೆ](https://etvbharatimages.akamaized.net/etvbharat/prod-images/768-512-3264502-thumbnail-3x2-bng.jpg)
ಉಡುಪಿ ಕೃಷ್ಣಮಠದಲ್ಲಿ ಮಳೆಗಾಗಿ ಪ್ರಾರ್ಥನೆ
ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ಕೃಷ್ಣಮಠದಲ್ಲಿ ನಾಗರಿಕರೊಂದಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಮುಖ್ಯಪ್ರಾಣ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಸನ್ನಿಧಿಯಲ್ಲೂ ಪ್ರಾರ್ಥನೆ ಮಾಡಲಾಯಿತು.
ಉಡುಪಿ ಕೃಷ್ಣಮಠದಲ್ಲಿ ಮಳೆಗಾಗಿ ಪ್ರಾರ್ಥನೆ
ಪರ್ಯಾಯ ಪಲಿಮಾರು, ಅದಮಾರು ಮಠಾಧೀಶರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಕಳೆದ ಒಂದು ವಾರದಿಂದ ನಗರದ ನಿವಾಸಿಗಳು ನೀರಿಲ್ಲದೇ ಪರದಾಡುತ್ತಿದ್ದಾರೆ. ಹೀಗಾಗಿ ವರುಣನ ಕೃಪೆಗಾಗಿ ಪೂಜೆ, ಪ್ರಾರ್ಥನೆ, ಜಪ - ತಪ ಗಳನ್ನು ನಡೆಸಲಾಯಿತು.