ಕರ್ನಾಟಕ

karnataka

ETV Bharat / state

ಉಡುಪಿ: ಗಾಂಜಾ ಸಾಗಿಸುತ್ತಿದ್ದ ಯುವಕ ಬಂಧನ - ಉಡುಪಿ ಪೊಲೀಸ್ ಠಾಣೆ

ಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಉಡುಪಿ‌ ಪೊಲೀಸರು ಬಂಧಿಸಿದ್ದಾರೆ.

Udupi police
Udupi police

By

Published : Aug 14, 2020, 7:07 PM IST

ಉಡುಪಿ:ಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿ ಎಂಬಲ್ಲಿ ನಡೆದಿದೆ.

ಮೊಹಮ್ಮದ್ ಅಬ್ದುಲ್ ರೆಹಮಾನ್ (24) ಬಂಧಿತ ಆರೋಪಿ. ಆರೋಪಿ ಮೊಹಮ್ಮದ್ ಅಬ್ದುಲ್ ರೆಹಮಾನ್, ಮಸೂದ್ ಯಾನೆ ಚಿನ್ನು ಎಂಬವನಿಂದ ಗಾಂಜಾ ತೆಗೆದುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಈ ವೇಳೆ ಖಚಿತ ಮಾಹಿತಿ ಪಡೆದ ಉಡುಪಿ ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಯನ್ನು ಕುಂದಾಪುರ ಕೋಡಿ ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ‌ ಮೊಹಮ್ಮದ್ ಅಬ್ದುಲ್ ರೆಹಮಾನ್‌ನಿಂದ 33 ಸಾವಿರ ಮೌಲ್ಯದ ಗಾಂಜಾ ಹಾಗೂ 10,000 ರೂಪಾಯಿ ಮೌಲ್ಯದ ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details