ಕರ್ನಾಟಕ

karnataka

ಗಾಂಜಾ ಸೇವನೆ ಮತ್ತು ಮಾರಾಟ ಆರೋಪ:ಇಬ್ಬರ ಸೆರೆ

By

Published : Feb 18, 2020, 7:32 AM IST

ಗಾಂಜಾ ಸೇವನೆ ಮತ್ತು ಮಾರಾಟ ಮಾಡಿದ ಹಿನ್ನೆಲೆ ಉಡುಪಿಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Marijuana sellers arrested in udupi
ಗಾಂಜಾ ಸೇವನೆ ಮತ್ತು ಮಾರಾಟ ಆರೋಪ

ಉಡುಪಿ:ಗಾಂಜಾ ಸೇವನೆ ಮತ್ತು ಮಾರಾಟ ಆರೋಪದಡಿ ಕುಂದಾಪುರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಕುಂದಾಪುರ ತಾಲೂಕಿನ ವಕ್ವಾಡಿ ಜನತಾ ಕಾಲೋನಿ ನಿವಾಸಿಗಳಾದ ಮೊಹಮ್ಮದ್ ಹನೀಫ್​​ (45), ಅಶ್ರಫ್ (29), ಬಂಧಿತ ಆರೋಪಿಗಳು. ಪ್ರಕರಣದ ಉಳಿದ ಆರೋಪಿಗಳಾದ ಮೊಹಮ್ಮದ್ ಆಸೀಫ್​​ ಹಾಗು ಇಲಿಯಾಸ್ ಇಬ್ಬರು ದಾಳಿ ವೇಳೆ ಪರಾರಿಯಾಗಿದ್ದಾರೆ.

ಉಡುಪಿ ಡಿಸಿಐಬಿ ಗೆ ಸಿಕ್ಕಿದ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದ್ದು, ಬಂಧಿತ ಆರೋಪಿಗಳಿಂದ 610 ಗ್ರಾಂ ತೂಕದ 20 ಸಾವಿರ ರೂ. ಮೌಲ್ಯದ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ-1985 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details