ಉಡುಪಿ: ಲಕ್ಷಾಂತರ ಬೆಲೆಯ ಬೈಕ್‌ನಲ್ಲಿ ಕರ್ಕಶ ಶಬ್ಧ ಮಾಡಿಕೊಂಡು ಹೋಗುವವರಿಗೆ ಮಣಿಪಾಲ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸೈಲೆನ್ಸರ್ಗಳ ಮೇಲೆ ಬುಲ್ಡೋಜರ್ ಹರಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೆಲವರು ಬೈಕ್‌ಗಳ ಸೈಲೆನ್ಸರ್‌ಗಳನ್ನು ಕರ್ಕಶ ಶಬ್ಧ ಬರುವಂತೆ ಮಾರ್ಪಾಡು ಮಾಡಿ ನಗರದಲ್ಲಿ ಕಿರಿಕಿರಿ ವಾತಾವರಣ ಉಂಟು ಮಾಡುತ್ತಿದ್ದರು.
ಪ್ರಕರಣ ದಾಖಲಾಗುತ್ತದೆ ಎಂದು ತಿಳಿದಿದ್ದರೂ ಇಂತವರು ಯಾವುದಕ್ಕೂ ಡೋಂಟ್ ಕೇರ್. ಆದ್ರೆ, ಇಂತಹ ದುಸ್ಸಾಹಸ ಮೆರೆಯುವ ರೋಡ್ ರೋಮಿಯೊಗಳಿಗೆ ಉಡುಪಿಯ ಮಣಿಪಾಲ ಪೊಲೀಸರು ವಿಭಿನ್ನ ರೀತಿ ಎಚ್ಚರಿಸಿದ್ದಾರೆ.
ಸೈಲೆನ್ಸರ್ಗಳ ಮೇಲೆ ಬುಲ್ಡೋಜರ್ ಹರಿಸಿ ಮಣಿಪಾಲ ಪೊಲೀಸರಿಂದ ಖಡಕ್ ಎಚ್ಚರಿಕೆ.. ಜ.1ರಿಂದ ಇಂತಹ ಬೈಕ್ ಸವಾರರ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, 50 ದ್ವಿಚಕ್ರ ವಾಹನ ಹಾಗೂ ಒಂದು ಕಾರ್‌ನ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ಜತೆಗೆ ಸೈಲೆನ್ಸರ್ ವಶಪಡಿಸಿಕೊಂಡಿದ್ದಾರೆ.
ಹೀಗೆ ವಶಕ್ಕೆ ಪಡೆದ ಸೈಲೆನ್ಸರ್‌ಗಳನ್ನು ಮಣಿಪಾಲ ಠಾಣೆಯ ಪಕ್ಕದ ಹೆದ್ದಾರಿಯಲ್ಲಿ ಸಾಲಾಗಿ ಜೋಡಿಸಿಟ್ಟು ಅದರ ಮೆಲೆ ಬುಲ್ಡೋಜರ್ ಹರಿಸಿ ನಾಶಪಡಿಸಿದ್ದಾರೆ. ಹೀಗೆ ಬುಲ್ಡೋಜರ್‌ನಿಂದ ಸೈಲೆನ್ಸರ್ ಪುಡಿ ಆಗ್ತಿದ್ರೆ, ರಸ್ತೆಯಲ್ಲಿ ಹೋಗುವವರು ಕುತೂಹಲದಿಂದ ನೋಡಿ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ರು.
ಈ ಸುದ್ದಿಯನ್ನೂ ಓದಿ:ಎಷ್ಟು ದಿನ ತಪ್ಪಿಸಿಕೊಳ್ಳಲು ಸಾಧ್ಯ.. ಕೊನೆಗೂ ಊರ ಜನರ ಕೈಗೆ ಸಿಕ್ಕಿಬಿದ್ದಿ ಅಡಿಕೆ ಕಳ್ಳ.. ವಿಡಿಯೋ ವೈರಲ್!
ಮೋಟಾರ್ ವಾಹನ ಕಾಯ್ದೆಯಲ್ಲಿ ಇಂತಹ ಶಬ್ಧ ಮಾಲಿನ್ಯ ಮಾಡುವ ವಾಹನಗಳ ವಿರುದ್ಧ 500 ರಿಂದ 2000 ರೂ.ಗಳವರೆಗೆ ದಂಡ ವಿಧಿಸಿ, ಮಾರ್ಪಾಡು ಮಾಡಿದ ಸಲಕರಣೆಗಳನ್ನು ವಶಕ್ಕೆ ತೆಗೆದುಕೊಳ್ಳಲು ಅವಕಾಶವಿದೆ.
ಜಿಲ್ಲೆಯಲ್ಲಿ ಸೈಲೆನ್ಸರ್ ಬದಲಾಯಿಸುವ ಗ್ಯಾರೇಜ್, ಶೋ ರೂಮ್‌ಗಳ ವಿರುದ್ಧ ಕಾರ್ಯಾಚರಣೆಗೂ ಮುಂಗಾಗಿರುವ ಪೊಲೀಸರು, ದಂಡ ವಿಧಿಸಿ ಪರವಾನಿಗೆ ರದ್ದುಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉಡುಪಿಯಲ್ಲಿ ಇನ್ನಾದ್ರೂ ದ್ವಿಚಕ್ರ ವಾಹನಗಳ ಕರ್ಕಶ ಶಬ್ಧ ಕೊನೆಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ
ಕಾಣಿಕೆ ಡಬ್ಬಿಯಲ್ಲಿದ್ದ ನಗದು ಕಳವು
ಕಾಪು: ಇಲ್ಲಿನ ಮೂಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ನಾರಾಯಣಗುರು ಮಂದಿರಕ್ಕೆ ನಿನ್ನೆ ತಡರಾತ್ರಿ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಕಳವು ಮಾಡಿರುವ ಘಟನೆ ನಡೆದಿದೆ.
ನಾರಾಯಣ ಗುರು ಮಂದಿರಕ್ಕೆ ನುಗ್ಗಿ ಕಳ್ಳತನ.. ಪೂಜೆಗಾಗಿ ಅರ್ಚಕ ಬೆಳಗ್ಗಿನ ಜಾವ ಮಂದಿರಕ್ಕೆ ಬರುವ ಸಮಯದಲ್ಲಿ ಈ ಘಟನೆ ನೋಡಿ ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.