ಕರ್ನಾಟಕ

karnataka

ETV Bharat / state

ಆದಿತ್ಯರಾವ್‌ ಕುಟುಂಬದ ಕುರಿತು ನೆರೆಮನೆ ನಿವಾಸಿಗಳು ಹೇಳೋದೇನು? - ಮಂಗಳೂರು ಬಾಂಬ್​ ಪ್ರಕರಣ ಆರೋಪಿ ವಿಚಾರಣೆ ಸುದ್ದಿ

ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್ ಕುರಿತು​ ಅವರ ನೆರೆಮನೆಯವರು ಏನು ಹೇಳಿದ್ದಾರೆ ಅನ್ನೋದನ್ನು ನೋಡೋಣ.

mangalore-bomb-accused-neighbors-reaction
ಮಂಗಳೂರು ಬಾಂಬ್​ ಪ್ರಕರಣ

By

Published : Jan 23, 2020, 9:17 AM IST

ಉಡುಪಿ :ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವ ಪ್ರಕರಣದ ಆರೋಪಿ ಆದಿತ್ಯರಾವ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಮಣಿಪಾಲದ ಅನಂತನಗರದಲ್ಲಿರುವ ಆರೋಪಿ ಮನೆಯ ಹತ್ತಿರ ವಾಸವಾಗಿರೋ ನೆರೆಮನೆಯವರು ಪ್ರಕರಣದ ಕುರಿತು ಮಾತನಾಡಿದ್ದಾರೆ.

ಎಂಬಿಎ ಮತ್ತು ಬಿಇ ಪದವಿ ಪಡೆದಿದ್ದ ಆದಿತ್ಯನನ್ನು ನಾವು ನೋಡಿಯೇ ಕೆಲವು ವರ್ಷಗಳಾಗಿವೆ. ಆತನ ತಾಯಿ ನಮ್ಮ ಜೊತೆ ಬೆರೀತಾ ಇದ್ದರು. ತಂದೆಗೆ ಮಾತು ಕಡಿಮೆ. ಆದಿತ್ಯನನ್ನು ನೋಡಿ ಬಹಳ ವರ್ಷಗಳಾಗಿದ್ದವು. ಈ ಸುದ್ದಿ ಕೇಳಿ ತುಂಬಾ ಅಚ್ಚರಿಯಾಯ್ತು ಅಂತಾರೆ ನೆರೆಮನೆ ನಿವಾಸಿ ಪೂರ್ಣಿಮಾ.

ಆರೋಪಿ ಬಗ್ಗೆ ನೆರೆಮನೆಯ ನಿವಾಸಿಗಳು ಹೇಳೋದೇನು?

ಆದಿತ್ಯನ ಕುಟುಂಬ ಬೇರೆಯವರ ಜೊತೆ ಬೆರೆಯುತ್ತಿರಲಿಲ್ಲ. ಇವರು ಮಾತ್ರ ಅಂತಲ್ಲ, ಅನಂತನಗರದ ಬಹುತೇಕ ಮನೆಯವರು ಸ್ಥಿತಿವಂತರು. ದೊಡ್ಡ ದೊಡ್ಡ ಮನೆಯಲ್ಲಿ ವಾಸಿಸುವವರು. ಹೀಗಾಗಿ ಅವರ ಪಾಡಿಗೆ ಅವರು ಇರುತ್ತಿದ್ದರು. ಅವನ ತಾಯಿ ಅಪರೂಪಕ್ಕೆ ನೋಡಲು ಸಿಗುತ್ತಿದ್ದರು. ಆದರೆ ಆದಿತ್ಯರಾವ್‌ನನ್ನು ನೋಡಿ ಬಹಳ ವರ್ಷಗಳಾಗಿವೆ ಅನ್ನೋದು ಸ್ಥಳೀಯ ನಿವಾಸಿ ಗಣೇಶ್​ ರಾಜ್ ಮಾತು.​

ABOUT THE AUTHOR

...view details