ಉಡುಪಿ:ಮಂಗಳೂರು ಟಗ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಯುವಕ ಉಡುಪಿಯ ಪಡುತೋನ್ಸೆ ಬೆಂಗ್ರೆ ಬಳಿ ದಡಕ್ಕೆ ಬಂದು ತಲುಪಿದ್ದಾರೆ.
ನಸೀಮ್ ಎಂಬವರು ಟ್ಯೂಬ್ ಸಹಾಯದಿಂದ ಸತತವಾಗಿ ಈಜಿ ದಡಕ್ಕೆ ಬದುಕಿ ಬಂದಿದ್ದಾರೆ. ಹರಿಯಾಣ ಮೂಲದ ಯುವಕ ಮಂಗಳೂರು ಎಂಆರ್ಪಿಎಲ್ ಕಂಪನಿಯ ನೌಕರರಾಗಿದ್ದಾರೆ. ಮಂಗಳೂರಿನಲ್ಲಿ ದೋಣಿ ಮಗುಚಿ ಬಿದ್ದ ಸಂದರ್ಭ ಇವರು ನೀರುಪಾಲಾಗಿದ್ದರು.
ಈತನ ಜೊತೆಗೆ ನೀರುಪಾಲಾಗಿದ್ದ ಇನ್ನಿಬ್ಬರು ಮಟ್ಟು ಪರಿಸರದಲ್ಲಿ ಸೇರಿದ್ದರು. ನಸೀಮ್ನನ್ನು ವಿಚಾರಣೆ ಮಾಡಿ ಮಲ್ಪೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಟಗ್ನಲ್ಲಿದ್ದ ಒಟ್ಟು 9 ಜನರಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ದಡ ಸೇರಿದ್ದಾರೆ. ಇನ್ನೂ 5 ಜನರು ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ತೌಕ್ತೆ ಹೊಡೆತಕ್ಕೆ ಆಳ ಸಮುದ್ರದಲ್ಲಿ ಸಿಲುಕಿದ ಎರಡು ಬೋಟ್ಗಳು; 5 ಮಂದಿ ನಾಪತ್ತೆ
ಭೋರ್ಗರೆಯುತ್ತಿದೆ ಸಮುದ್ರ:ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಉಡುಪಿಯ ಕುಂದಾಪುರ, ಬೈಂದೂರು ಭಾಗದಲ್ಲಿ ಮಳೆ ಹೆಚ್ಚಾಗುತ್ತಿದ್ದು ಬೈಂದೂರು, ಉಪ್ಪುಂದ, ಸೋಮೇಶ್ವರ ಭಾಗದಲ್ಲಿ ಸದ್ಯ ಅಲೆಗಳ ಅಬ್ಬರ ಹೆಚ್ಚಿದೆ. ಗಂಗೆಬೈಲಿನಲ್ಲಿ ದೋಣಿಯನ್ನು ದಡಕ್ಕೆ ಎಳೆದುತರಲು ಮೀನುಗಾರರು ಹರಸಾಹಸಪಟ್ಟಿದ್ದಾರೆ.
ಬೋಟ್ನ್ನು ದಡಕ್ಕೆ ಎಳೆದುತರಲು ಮೀನುಗಾರರು ಹರಸಾಹಸ ಬೈಂದೂರು ಮತ್ತು ಮರವಂತೆ ಭಾಗದಲ್ಲಿ 30ಕ್ಕೂ ಹೆಚ್ಚು ಕುಟುಂಬವನ್ನು ಸ್ಥಳೀಯ ಶಾಲಾ-ಕಾಲೇಜುಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಅಲ್ಲಿಯೇ ಸಂತ್ರಸ್ತ ಕುಟುಂಬಗಳಿಗೆ ಗಂಜಿ ಕೇಂದ್ರ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಭೇಟಿ ನೀಡಿ, ಪರಿಶೀಲಿಸಿದರು.