ಕರ್ನಾಟಕ

karnataka

ETV Bharat / state

ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಕೊಂದು, ಮೃತದೇಹ ಸುಡಲು ಯತ್ನಿಸಿದ ವ್ಯಕ್ತಿ! - ಉಡುಪಿ ಕೊಲೆ

ಅವರಿಬ್ಬರು ಗೆಳೆಯರು.. ಕುಡಿದ ಬಳಿಕ ಇಬ್ಬರೂ ಮನೆಗೆ ತೆರಳಿದ್ದರು. ಮಾತಿಗೆ ಮಾತು ಬೆಳೆದು ಜಗಳವಾಡಿ ಆಲ್ಬನ್ ಹೇಮಂತ್​ನನ್ನು ಹೊಡೆದು ಕೊಲೆ ಮಾಡಿ, ಮೃತದೇಹವನ್ನು ಮನೆ ಮುಂದೆ ಸುಡಲು ಯತ್ನಿಸಿದ್ದಾನೆ.

murder
murder

By

Published : Jul 25, 2020, 7:59 AM IST

ಉಡುಪಿ:ಕುಡಿದ ಮತ್ತಿನಲ್ಲಿ ಹೊಡೆದು ವ್ಯಕ್ತಿಯ ಕೊಲೆ ಮಾಡಿ ಮೃತದೇಹವನ್ನು ಮನೆ ಮುಂದೆ ಸುಡಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಅಲ್ಬನ್ ಡಿಸೋಜಾ (50) ಎಂದು ಗುರುತಿಸಲಾಗಿದೆ. ಹೇಮಂತ್ ಪೂಜಾರಿ‌ ಕೊಲೆಯಾದ ವ್ಯಕ್ತಿ. ಅಲ್ಬನ್ ಡಿಸೋಜಾ ಪುಂಚಲಕಾಡು ನಿವಾಸಿಯಾಗಿದ್ದು, ಖಾಸಗಿ ಬಸ್ ಚಾಲಕನಾಗಿದ್ದ. ಮೃತ ಹೇಮಂತ್ ‌ಪೂಜಾರಿ ಮೂಳೂರು ನಿವಾಸಿಯಾಗಿದ್ದರು.

ಇವರಿಬ್ಬರು ದಿನವೂ ಜೊತೆಗೆ ‌ಕುಡಿಯುತ್ತಿದ್ದ ಗೆಳೆಯರು. ನಿನ್ನೆ ರಾತ್ರಿ‌ ಕೂಡಾ ಪುಂಚಲಕಾಡಿನ ಬಾರ್​ನಲ್ಲಿ ಕುಡಿದಿದ್ದರು. ಕುಡಿದ ಬಳಿಕ ಇಬ್ಬರೂ ಅಲ್ಬನ್ ಡಿಸೋಜಾ ಮನೆಗೆ ತೆರಳಿದ್ದರು. ಮಾತಿಗೆ ಮಾತು ಬೆಳೆದು ಜಗಳವಾಡಿ ಆಲ್ಬನ್ ಹೇಮಂತ್​ನನ್ನು ಹೊಡೆದು ಕೊಲೆ ಮಾಡಿದ್ದಾನೆ.

ಕುಡಿದ ಅಮಲಿನಲ್ಲಿ ಮೃತದೇಹವನ್ನು ಮನೆಯ ಅಂಗಳದಲ್ಲಿ ಸುಡುವುದಕ್ಕೆ ಯತ್ನಿಸಿದ ಆರೋಪಿಯ ಬಗ್ಗೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಹೋಗಿತ್ತು. ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದ ಶಿರ್ವ ಠಾಣೆಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ABOUT THE AUTHOR

...view details