ಉಡುಪಿ:ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ವ್ಯಕ್ತಿವೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಎಂ.ಕೋಡಿ ಎಂಬಲ್ಲಿ ನಡೆದಿದೆ.
ಉಡುಪಿ: ಸಮುದ್ರದಲ್ಲಿ ಮುಳುಗಿ ಬೆಳಗಾವಿ ಮೂಲದ ವ್ಯಕ್ತಿ ಸಾವು - Belagavi based man dead in Udupi news
ಸಮುದ್ರದಲ್ಲಿ ಮುಳುಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ವ್ಯಕ್ತಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಎಂ.ಕೋಡಿ ಎಂಬಲ್ಲಿ ನಡೆದಿದೆ. ಸ್ಥಳೀಯರ ಸಹಕಾರದಿಂದ ವ್ಯಕ್ತಿಯ ಮೃತದೇಹವನ್ನು ಮೇಲೆತ್ತಲಾಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಮಂಜುನಾಥ (33) ಮೃತಪಟ್ಟ ವ್ಯಕ್ತಿ. ಕುಂದಾಪುರ ಸುತ್ತಮುತ್ತ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ ಹಾಗೂ ಆತನ ಸ್ನೇಹಿತ ಕೆಲಸಕ್ಕೆ ರಜೆ ಇದ್ದ ಕಾರಣ ಸೋಮವಾರ ಸಂಜೆ ಕುಂದಾಪುರ ಸಮೀಪದ ಎಂ.ಕೋಡಿ ಬಳಿ ಸಮುದ್ರ ಸ್ನಾನಕ್ಕೆಂದು ತೆರಳಿದ್ದರು. ಇಬ್ಬರು ಅರಬ್ಬೀ ಸಮುದ್ರದಲ್ಲಿ ಸ್ನಾನಕ್ಕೆ ಇಳಿದಿದ್ದರು. ಅಲೆಗಳ ರಭಸಕ್ಕೆ ಮಂಜುನಾಥ ಸಮುದ್ರದಲ್ಲಿ ಮುಳುಗಿದ್ದು, ಇನ್ನೋರ್ವ ಪಾರಾಗಿದ್ದಾನೆ.
ಸ್ಥಳೀಯರ ಸಹಕಾರದಿಂದ ಮಂಜುನಾಥನ ಮೃತದೇಹವನ್ನು ಮೇಲೆತ್ತಲಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.